ಬೈದ್ಯನಾಥ್ ಜ್ಯೋತಿರ್ಲಿಂಗ ದೇವಸ್ಥಾನವನ್ನು ಬಾಬಾ ಧಾಮ್ ಹಾಗೂ ಬೈದ್ಯನಾಥ್ ಧಾಮ್ ಎಂದೂ ಕರೆಯಲಾಗುತ್ತದೆ. ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಶಿವ ದೇವಾಲಯಗಳಲ್ಲಿ ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ಬೈದ್ಯನಾಥ್ ದೇವಾಲಯದಲ್ಲಿ ಬಾಬಾ ಬೈದ್ಯನಾಥ್ ನ ದೇವಾಲಯ ಪ್ರಮುಖವಾಗಿದೆ ಹಾಗೂ ಇಲ್ಲಿ ಆಸೀನವಾದ ಶಿವಲಿಂಗವೂ ಇದೆ. ಜೊತೆಗೆ 21 ಇತರ ದೇವಾಲಯಗಳೂ ಇವೆ.
ಇಲ್ಲಿ ಪ್ರತಿ ವರ್ಷ ಭಕ್ತರ ಮಹಾಪೂರವೇ ಹರಿದು ಬರುತ್ತದೆ. ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಆಚರಿಸಲಾಗುವ ಶ್ರಾವಣ ಮೇಳ ಇಲ್ಲಿನ ಬಹು ಪ್ರಸಿದ್ಧವಾದ ಮೇಳವಾಗಿದೆ ಹಾಗೂ ಹೆಚ್ಚಿನ ಭಕ್ತರು ಇದೇ ಸಮಯದಲ್ಲಿ ಭೇಟಿ ನೀಡುತ್ತಾರೆ.


Click it and Unblock the Notifications