ಭಬುವಾ ದ ಬಳಿಯಲ್ಲಿರುವ ಕೈಮೂರ್ ವನ್ಯಜೀವಿ ಧಾಮ 1342 ಕಿ.ಮೀ ವ್ಯಾಪಿಸಿದ್ದು ರಾಜ್ಯದ ಅತ್ಯಂತ ದೊಡ್ಡ ವನ್ಯಜೀವಿ ಧಾಮವಾಗಿದೆ ಹಾಗೂ ಇಲ್ಲಿ ಹಲವು ಜಲಪಾತಗಳು ಮತ್ತು ಸರೋವರಗಳೂ ಇವೆ. ಇಲ್ಲಿ ಹುಲಿಗಳು, ಚಿರತೆಗಳು, ಕಾಡು ಹಂದಿಗಳು, ಸಂಬಾರ್ ಜಿಂಕೆಗಳು, ಚಿತಲ್ ಗಳು, ನಾಲ್ಕು ಕೊಂಬಿನ ಜಿಂಕೆ ಮತ್ತು ನೀಲ್ ಗಾಯ್ಸ್ ಇವೆ ಜೊತೆಗೆ...
ಕೈಮೂರ್ ಬೆಟ್ಟಗಳಲ್ಲಿ ಈ ಅದ್ಭುತವಾದ ಜಲಪಾತ ಇದೆ. ಇದನ್ನು ಪಿಕ್ ನಿಕ್ ಸ್ಥಳವನ್ನಾಗಿ ಗುರುತಿಸಲಾಗುವುದು ಹೆಚ್ಚು. ಇಲ್ಲಿನ ತಂಪಾದ ನೀರು ಹಾಗೂ ಸುತ್ತಲೂ ಇರುವ ಪ್ರದೇಶ ಇದನ್ನು ಆಟವಾಡಲು ಮತ್ತು ನೀರಿನಲ್ಲಿ ಸಮಯ ಕಳೆಯಲು ಅತ್ಯಂತ ಸೂಕ್ತವಾದ ಸ್ಥಳವನ್ನಾಗಿಸಿದೆ. ಇದು ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಒಂದು ಜಲಪಾತವಾಗಿದೆ....
ಮುಂಡೇಶ್ವರಿ ದೇವಾಲಯ ಶಿವ ಹಾಗೂ ಶಕ್ತಿಯ ಆರಾಧನೆಯ ದೇವಾಲಯವಾಗಿದೆ ಹಾಗೂ ಇದನ್ನು ಮುಂಡೇಶ್ವರಿ ಬೆಟ್ಟಗಳ ಮೇಲೆ ಇದೆ. ಈ ದೇವಾಲಯವನ್ನು ಜಗತ್ತಿನ ಇನ್ನೂ ಪೂಜೆ ನಡೆಯುತ್ತಿರುವ ಅತ್ಯಂತ ಹಳೆಯ ದೇವಾಲಯ ಎಂದು ಕರೆಯಲಾಗುತ್ತದೆ. ಇಲ್ಲಿ ಯಾವುದೇ ಅಡೆ ತಡೆಗಳು ಅಥವಾ ವಿರಾಮವಿಲ್ಲದೆ ಪೂಜೆ ನಡೆಯುತ್ತದೆ. ಇಲ್ಲಿ ಗಣೇಶ, ಸೂರ್ಯ ಹಾಗೂ...
ಸಿದ್ಧನಾಥ ದೇವಾಲಯ ಬಾಬಾ ರತನ್ ಪುರಿ ದೇವಾಯಲ ಎಂದೂ ಪ್ರಸಿದ್ಧವಾಗಿದೆ. ಇದೊಂದು ಶಿವ ದೇವಾಲಯವಾಗಿದೆ. ಕರ್ಮನಾಶ ನದಿಯ ತಟದಲಿರುವ ಬರೌರಾ ಗ್ರಾಮದಲ್ಲಿ ಈ ದೇವಾಲಯ ಇದೆ. ಬಾಬಾ ಗೋರಖ್ ಪುರ್ ಅವರ ಶಿಷ್ಯ ಸಂತ ರತನ್ ಪುರಿ ಬಾಬಾ ಈ ದೇವಾಲಯವನ್ನು ಕಟ್ಟಿಸಿದ್ದನು.
ಈ ದೇವಾಲಯದಲ್ಲಿ ಧಾರ್ಮಿಕ ಕತ್ತನೆಗಳಿವೆ ಹಾಗೂ...
ಬೈದ್ಯನಾಥ್ ಜ್ಯೋತಿರ್ಲಿಂಗ ದೇವಸ್ಥಾನವನ್ನು ಬಾಬಾ ಧಾಮ್ ಹಾಗೂ ಬೈದ್ಯನಾಥ್ ಧಾಮ್ ಎಂದೂ ಕರೆಯಲಾಗುತ್ತದೆ. ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಶಿವ ದೇವಾಲಯಗಳಲ್ಲಿ ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ಬೈದ್ಯನಾಥ್ ದೇವಾಲಯದಲ್ಲಿ ಬಾಬಾ ಬೈದ್ಯನಾಥ್ ನ ದೇವಾಲಯ ಪ್ರಮುಖವಾಗಿದೆ ಹಾಗೂ ಇಲ್ಲಿ ಆಸೀನವಾದ ಶಿವಲಿಂಗವೂ...
ಕರ್ಮನಾಶ ನದಿಯು ಗಂಗಾ ನದಿಯ ಒಂದು ಉಪನದಿಯಾಗಿದೆ. ಇದು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಹರಿಯುತ್ತದೆ. ಕರ್ಮನಾಶ ಎಂಬುದರ ಪದಶಃ ಅರ್ಥ ಧಾರ್ಮಿಕ ಶ್ರೇಷ್ಠತೆಯ ನಿರ್ಮೂಲಕ ಎಂಬುದಾಗಿದೆ. ಈ ನದಿಯ ಜೊತೆಗೆ ಹತ್ತು ಹಲವು ಕತೆಗಳು ಸಂಬಂಧ ಹೊಂದಿವೆ. ಈ ನದಿಗೆ ಅಡ್ಡಲಾಗಿ ಎರಡು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಲತೀಫ್ ಶಾ...
ಭಬುವಾ ಕೈಮೂರ್ ನ ಒಂದು ಪ್ರಮುಖ ನಗರ. ಇದು ಐತಿಹಾಸಿಕವಾಗಿ ಬಹಳ ಮಹತ್ವ ಪಡೆದ ನಗರವಾಗಿದೆ. ಇದು ಶಾಹಾಬಾದ್ ನ ಒಂದು ಉಪನಗರವಾಗಿತ್ತು. ಇಲ್ಲಿನ ಏಕ್ತಾ ಚೌಕ್ ನಲ್ಲಿ ಮಹಾತ್ಮಾ ಗಾಂಧೀಜಿಯ ಪ್ರತಿಮೆಯನ್ನು ಕಾಣಬಹುದು. ಇದು ಮಾರುಕಟ್ಟೆ ವಲಯದ ಸಮೀಪದಲ್ಲೇ ಇದೆ. ಇಲ್ಲಿನ ಇತರೆ ಪ್ರಮುಖ ಸ್ಥಳಗಳೆಂದರೆ ಜಯಪ್ರಕಾಶ್ ಚೌಕ್ ಮತ್ತು...
ರಾಮ್ ಘಡ್ ಪ್ರಸಿದ್ಧ ಮುಂಡೇಶ್ವರಿ ದೇವಾಲಯದ ನೆಲೆಬೇಡಾಗಿದೆ. ಇದು ರಾಜ್ಯದ ಒಂದು ಹಳೆಯ ಕಾಲದ ದೇವಾಲಯವಾಗಿದೆ. ಇಲ್ಲಿ ವಾಸ್ತುಶಿಲ್ಪದ ಶ್ರೇಷ್ಟತೆಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಈ ದೇವಾಲಯವನ್ನು ಕ್ರಿ.ಶ. 635 ರಲ್ಲಿ ಕಟ್ಟಲಾಗಿದೆ. ಇದು ಬೆಟ್ಟದ ತುದಿಯಲ್ಲಿ ಕಟ್ಟಲಾಗಿದೆ ಹಾಗೂ 600 ಅಡಿ ಎತ್ತರದಲ್ಲಿದೆ.
ಅಧೌರಾ ಕೈಮೂರ್ ಪ್ರಸ್ಥಭೂಮಿಯಲ್ಲಿರುವ ಒಂದು ಸುಂದರವಾದ ಸ್ಥಳವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 2000 ಅಡಿ ಎತ್ತರದಲ್ಲಿರುವ ಪ್ರದೇಶವಾಗಿದೆ. ಇಲ್ಲಿನ ಶಾಂತ ಪರಿಸರವೇ ಇಲ್ಲಿನ ವಿಶೇಷತೆ. ಹಚ್ಚ ಹಸುರಿನಿಂದ ಆವೃತವಾದ ಈ ಸ್ಥಳ ಬಹಳ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ.
ಭೌಬುವಾ ದಿಂದ ದಕ್ಷಿಣಕ್ಕೆ ಸುಮಾರು 11 ಕಿ.ಮೀ ದೂರದಲ್ಲಿ ಇರುವ ಗ್ರಾಮ ಇದಾಗಿದೆ. ಇಲ್ಲಿನ ಸ್ಥಳೀಯರ ನಂಬಿಕೆಯಂತೆ ಇದನ್ನು ಕುಮಾರ ಚಂದ್ರಸೇನ್ ಸರನ್ ಸಿಂಘ್ ಆಳ್ವಿಕೆ ನಡೆಸಿದ್ದನು. ಇವನು ಪರಸ್ ವಂಶಸ್ಥನಾಗಿದ್ದನು. ಈ ಗ್ರಾಮವು ಐತಿಹಾಸಿಕ ಪ್ರಾಮುಖ್ಯತೆಯ ಕಾರಣದಿಂದಾಗಿ ಪ್ರಸಿದ್ಧವಾಗಿದೆ.
ಚೈನ್ಪುರ್ ಒಂದು ದೊಡ್ಡ ಗ್ರಾಮವಾಗಿದ್ದು ಹಲವು ಉತ್ಸವಗಳ ನೆಲೆಬೀಡಾಗಿದೆ. ಕಾಳಿ ಪೂಜಾ, ಹೋಳಿ, ದುರ್ಗಾ ಪೂಜಾ ಇಲ್ಲಿನ ಪ್ರಮುಖ ಹಬ್ಬಗಳಾಗಿವೆ. ಇವುಗಳ ಜೊತೆಗೆ ಜನ್ಮಾಷ್ಟಮಿ, ಶಿವರಾತ್ರಿ, ಹನುಮಾನ್ ಜಯಂತಿ, ಸಮಾ ಚಕೆವಾ, ಛತ್, ಚೌರ್ ಚನರೆ ಕೂಡ ಬಹಳ ಅದ್ದೂರಿಯಾಗಿ ಆಚರಿಸುವ ಹಬ್ಬಗಳಾಗಿವೆ. ನೀಲಕಂಠ ಮಂದಿರ ಶಿವ ದೇವರಿಗೆ...
ಚೋರ್ ಘಾಟಿಯಾ ಕೈಮೂರ್ ಬಬುವಾ ದ ಅತ್ಯಂತ ರಮಣೀಯ ಸ್ಥಳವಾಗಿದೆ. ಅತ್ಯಂತ ಸುಂದರವಾದ ಪರಿಸರ ಮುಂದೆ ಇದ್ದರೆ ಹಿಂದಿನಿಂದ ಕಾಣುವ ರಮಣೀಯ ಜಲಪಾತ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಎಂಥವರನ್ನೂ ಬೆರಗಾಗಿಸದೆ ಇರದು.
ದುರೌಲಿ ಇಲ್ಲಿ ಚೆರೋಗಳು ಕಟ್ಟಿಸಿದ್ದ ಎರಡು ಹಳೆಯ ದೇವಾಲಯಗಳ ಕಾರಣದಿಂದಾಗಿ ಪ್ರಸಿದ್ಧವಾಗಿದೆ. ಈ ದೇವಾಲಯಗಳ ವಿಶೇಷತೆ ಇವುಗಳ ಎಂದರೆ ಇವುಗಳನ್ನು ಕಟ್ಟಲಾದ ಕಾಲ ಮತ್ತು ವಾಸ್ತುಶಿಲ್ಪದ ವಿಶೇಷತೆ. ಈ ಎರಡೂ ದೇವಾಲಯಗಳು ಸುಂದರವಾದ ಶಿಲ್ಪಕಲೆಗಳ ಬೀಡಾಗಿದೆ.
ಭೆಕಾಶ್ ಭಬುವಾ ಜಿಲ್ಲೆಯಲ್ಲಿದೆ ಹಾಗೂ ಸುರ್ವರಾ ನದಿಯ ದಂಡೆಯಲ್ಲಿದೆ. ಭೆಕಾಶ್ ನ ಊರ ಹೊರಗೆ ಒಂದು ಹಳೆಯ ಶಿವ ದೇವಾಲಯವನ್ನು ಇದೆ.