ಜಿಂದ್ ಜಿಲ್ಲೆಯ ತೆಹ್ಸಿಲ್ ನ ಮುಖ್ಯಕಚೇರಿ ಸಫಿದಾನ್ ಜಿಂದ್ ನಿಂದ 35 ಕಿ.ಮೀ. ದೂರದ ಯಮುನಾ ಕಾಲುವೆಯ ಪಶ್ಚಿಮ ಭಾಗದ ಹನ್ಸಿಯಲ್ಲಿದೆ. ಪಾನಿಪತ್-ಜಿಂದ್ ರೈಲು ಮಾರ್ಗದ ಮೂಲಕವೂ ಇದು ಸಿಗುತ್ತದೆ. ಇತರ ಎಲ್ಲಾ ಪಟ್ಟಣ, ನಗರ ಮತ್ತು ಹಳ್ಳಿಗಳಂತೆ ಸಫಿದಾನವು ಇತಿಹಾಸ ಪೂರ್ವ ಮೂಲ ಹಾಗೂ ಸಂಬಂಧ ಹೊಂದಿದೆ. ಮಹಾಭಾರತದಲ್ಲಿ ಉಲ್ಲೇಖವಿರುವ ಸರ್ಪದೇವಿ ಅಥವಾ ಸರ್ಪಿದಾಧಿಯನ್ನು ಸಫಿದಾನ ಎಂದು ಕರೆಯಲಾಗುತ್ತದೆ ಎನ್ನುವುದು ಪುರಾಣಗಳಲ್ಲಿದೆ. ನಾಗಾಗಳೊಂದಿಗಿನ ಹೋರಾಟದಲ್ಲಿ ಪರೀಕ್ಷಿತ ಸಾವನ್ನಪ್ಪಿದ ಮತ್ತು ತನ್ನ ತಂದೆಯ ಸಾವಿನ ಸೇಡು ತೀರಿಸಲು ಜನಮೇಜಯ ನಾಗಗಳನ್ನು ಸೋಲಿಸಿದ. ಸರ್ಪಾಸ್ತ್ರವನ್ನು ಬಿಡಲು ಆತ ಸರ್ಪದೇವಿಯಲ್ಲಿ ಒಂದು ಹಾವನ್ನು ಬಲಿ ನೀಡಿದ. ಆ ಪ್ರದೇಶವೇ ಇಂದು ಸಫಿದಾನವಾಗಿದೆ.
ನಗರವು ಮೂರು ಇತಿಹಾಸಪೂರ್ವ ತೀರ್ಥಯಾತ್ರೆ, ನಾಗೇಶ್ವರ, ಮಹಾದೇವ, ನಾಗಾದಮನಿ ದೇವಿ ಮತ್ತು ನಾಗಕ್ಷೇತ್ರ ಮಂದಿರಳಿಗೆ ನೆಲೆಯಾಗಿದೆ. ಈ ಪ್ರದೇಶದಲ್ಲಿ ನಡೆಸಿದ ಉತ್ಖನನದ ವೇಳೆ ಇತಿಹಾಸಗಾರರಿಗೆ ಪ್ರಾಚೀನ ಕಾಲದ ಮಡಕೆ ಚೂರುಗಳು ಸಿಕ್ಕಿವೆ. ಹರಪ್ಪನ್ ಕಂಚಿನಯುಗದ ಮೊದಲು ಈ ಪ್ರದೇಶದಲ್ಲಿ ಕೃಷಿ ಪ್ರಧಾನ ಸಮುದಾಯಗಳಿದ್ದವು ಎಂದು ಉತ್ಖನನ ವೇಳೆ ತಿಳಿದುಬಂದಿದೆ.


Click it and Unblock the Notifications