ಕಾಲೇಶ್ವರ್ನಾಥ್ ಮಂದಿರವೆಂದೂ ಕರೆಯಲ್ಪಡುವ ಈ ಪಿಥಂಪುರ್ ದೇವಾಲಯವು ಹಸ್ದೇವ್ ನದಿ ತೀರದಲ್ಲಿದೆ. ಈ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ, ಇಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುವ ಭಗವಾನ್ ಶಿವನ ವಿವಾಹ ಮಹೋತ್ಸವ. ಈ ಸಂದರ್ಭದಲ್ಲಿ ಸಂದರ್ಶಕರು ನಾಗ ಸಂತರ ಪಾಲ್ಗೊಳ್ಳುವಿಕೆಯನ್ನೂ ಕೂಡ ಕಾಣಬಹುದು. ಇದರ ಜೊತೆಗೆ, ಮಹಾ ಶಿವರಾತ್ರಿ ಮತ್ತು ರಂಗ ಪಂಚಮಿ ಗಳಂದು 10 ದಿನಗಳ ಆಚರಣೆಯನ್ನು ಪ್ರತೀ ವರ್ಷವೂ ಕೂಡ ನೆರವೇರಿಸಲಾಗುತ್ತದೆ.


Click it and Unblock the Notifications