ಜಾಂಜಗೀರ್ ಗೆ ಭೇಟಿ ನೀಡುವ ಸಂದರ್ಶಕರಿಗೆ ದೇವರ್ ಘಟ ಒಂದು ಆದರ್ಶಪ್ರಾಯವಾದ ವಿಹಾರೀ ತಾಣವಾಗಬಲ್ಲದು. ಈ ಪ್ರದೇಶವು ಮೂರು ನದಿಗಳಾದ ಮಹಾನದಿ, ಲೀಲಾಗರ್, ಮತ್ತು ಶಿವಂತ್ ಇವುಗಳು ಸಂಗಮಿಸುವ ತ್ರಿವೇಣಿ ಸಂಗಮದ ಪ್ರಾಕೃತಿಕ ಸೌಂದರ್ಯವುಳ್ಳ ಸ್ಥಳವಾಗಿದೆ. ಸಂದರ್ಶಕರು ಇಲ್ಲಿಗೆ ತಮ್ಮ ಕುಟುಂಬ ಮತ್ತು ಮಿತ್ರರೊಡನೆ ಆಗಮಿಸಿ, ಇಲ್ಲಿನ ಪ್ರಕೃತಿಯ ಅದ್ಭುತವಾದ ಸೌಂದರ್ಯದ ಪಕ್ಷಿನೋಟವನ್ನು ಅಸ್ವಾದಿಸಬಹುದು. ಹವ್ಯಾಸೀ ಛಾಯಾಚಿತ್ರಗ್ರಾಹಕರಂತೂ ದೇವರ್ ಘಟಕ್ಕೆ ನಿಸ್ಸಂಶಯವಾಗಿಯೂ ಕೂಡ ಪದೇ ಪದೇ ಮರಳಿ ಬರುತ್ತಿರುತ್ತಾರೆ.


Click it and Unblock the Notifications