ಜಾಮ್ ನಗರದಲ್ಲಿ 1574 ಹಾಗೂ 1622 ರ ನಡುವೆ ಕಟ್ಟಲಾದ ಮೂರು ಜೈನ ದೇವಾಲಯಗಳಿವೆ. ಇದೊಂದು ಆಕರ್ಷಕ ಸ್ಥಳವಾಗಿದೆ. ಈ ಮೂರರಲ್ಲಿ ಶಾಂತಿನಾಥ ತೀರ್ಥಂಕರರಿಗೆ ಕಟ್ಟಲಾದ ದೇವಾಲಯ ರೈಸಿ ಷಾ ದಲ್ಲಿ ಒಳಗೆ ಮತು ಹೊರಗೆ ಅತ್ಯಂತ ಆಕರ್ಷಕ ಕೆತ್ತನೆ ಕೆಲಸಗಳನ್ನು ಗಮನಿಸಬಹುದಾಗಿದೆ. ಈ ದೇವಾಯಲದ ಗೊಮ್ಮಟದಲ್ಲಿ ಬಂಗಾರದಿಂದ ಮಾಡಿದ ಕೆತ್ತನೆ ಕೆಲಸಗಳನ್ನು ಕಾಣಬಹುದಾಗಿದೆ. ಎರಡನೆಯ ದೇವಾಲಯ ವರ್ಧಮಾನ ಷಾ ದೇವಾಲಯ ಈ ದೇವಾಲಯದಲ್ಲಿ ಆದಿನಾಥ ತೀರ್ಥಂಕರರನ್ನು ಪೂಜಿಸಲಾಗುತ್ತದೆ. ವರ್ಧಮಾನ ಷಾ ದೇವಾಲಯಕ್ಕೆ ಹೋಲಿಸಿದರೆ ಇದೊಂದು ಸರಳ ನಿರ್ಮಾಣವಾಗಿದೆ. ಮೂರನೆಯ ದೇವಾಲಯ ತ್ರಿವಳಿಗಳಲ್ಲೇ ಸಣ್ಣ ದೇವಾಲಯವಾದರೂ ಅತ್ಯಂತ ಆಸಕ್ತಿದಾಯಕ ವಿಷಗಳನ್ನು ಹೊಂದಿದೆ.


Click it and Unblock the Notifications