ಜಾಮ್ ನಗರ ಸುಂದರವಾದ ದೇವಾಲಯಗಳು, ಉದ್ಯಾನಗಳು ಮತ್ತು ಅಭಯಾರಣ್ಯಗಳ ನಗರವಾಗಿದೆ. ಇಲ್ಲಿರುವ ಹಿಂದೂ ದೇವಾಲಯಗಳ ಸಂಖ್ಯೆಯನ್ನು ನೋಡಿ ಇದನ್ನು ಛೋಟಾ ಕಾಶಿ ಎಂದೂ ಕರೆಯುತ್ತಾರೆ. ದೇವಾಲಯಗಳ ಜೊತೆಗೆ ಇಲ್ಲಿ ಹಲವು ದರ್ಗಾ ಗಳೂ ಇವೆ. ಇಲ್ಲಿನ ದರ್ಗಾಗಗಳಲ್ಲಿ ಒಂದು ಪ್ರಮುಖವಾದ ದರ್ಗಾ ಬೋಹ್ರಾ ಹಜಿರಾ ಇದು ದವೂದಿ ಬೋಹ್ರಾ ಸಮುದಾಯಕ್ಕೆ ಸೇರಿದ ದರ್ಗಾ ಆಗಿದೆ. ರಾಜ್ ಕೋಟ್ ಹೆದ್ದಾರಿಯ ಮಾರ್ಗದಲ್ಲಿರುವ ನದಿಯ ದಡದಲ್ಲಿ ಇರುವ ಈ ದರ್ಗಾ ಮುಸ್ಲಿಂ ಸಂತರೊಬ್ಬರಿಗೆ ಆರ್‍ಆಧನೆ ಸಲ್ಲಿಸುತ್ತದೆ ಹಾಗೂ ಆಕರ್ಷಕವಾದ ಅಮೃತಶಿಲೆಯ ರಚನೆಯಾಗಿದೆ.


Click it and Unblock the Notifications