ದೇಶದ ಪ್ರಮುಖವಾದ ಏಳು ಜೈನ ದೇವಾಲಯಗಳಲ್ಲಿ ಶಾಂತಿನಾಥ್ ದೇವಾಲಯವು ಒಂದಾಗಿದೆ. ಜೈನ ತೀರ್ಥಂಕರರಾದ ಶಾಂತಿನಾಥನಿಗಾಗಿ ನಿರ್ಮಿಸಲಾದ ಈ ಜೈನ ದೇವಾಲಯವು ಜೈಸಲ್ಮೇರ್ ಕೋಟೆಯ ಒಳಗಡೆ ನೆಲೆಗೊಂಡಿದೆ. ಈ ದೇವಾಲಯವು ತನ್ನ ವಾಸ್ತುಶಿಲ್ಪಕಲೆಯ ಪ್ರತಿಭಾವಂತಿಕೆಗಾಗಿ ಪ್ರಸಿದ್ಧಿಪಡೆದಿದೆ. ಈ ದೇವಾಲಯದಲ್ಲಿ ಶಾಂತಿನಾಥರ ಅದ್ವಿತೀಯವಾದ,ಭವ್ಯವಾದ ಕೆತ್ತನೆಗಳಿಂದ ಕೂಡಿದ ಸುಂದರವಾದ ಮೂರ್ತಿಯನ್ನು ಪೂಜಿಸಲಾಗುತ್ತದೆ.