ಸ್ಯಾಮ್ ಸ್ಯಾಂಡ್ ಡ್ಯೂನ್ಸ್ ಜೈಸಲ್ಮೇರ್ ನಗರದಿಂದ 42 ಕಿ.ಮೀ ದೂರದಲ್ಲಿ ನೆಲೆಸಿದೆ. ಸೂರ್ಯಾಸ್ತ ಸಮಯದಲ್ಲಿ ಮರುಭೂಮಿಯ ನೆರಳು ಬೆಳಕಿನಾಟವನ್ನು ನೋಡಲು ಈ ಸ್ಥಳ ಖ್ಯಾತಿ ಪಡೆದಿದೆ. ಪ್ರವಾಸಿಗರು ಇಲ್ಲಿ ಶಿಬಿರಾಗ್ನಿಯ ಮೋಜು, ಒಂಟೆ ಮತ್ತು ಜೀಪ್ ಸಫಾರಿ ಮಾಡಬಹುದು. ಸ್ಯಾಮ್ ಸ್ಯಾಂಡ್ ಡ್ಯೂನ್ಸ್ ನಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಮರುಭೂಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ಆಗ ಈ ಸ್ಥಳವು ಸಾಂಸ್ಕೃತಿಕ ತಾಣವಾಗಿ ಪರಿವರ್ತನೆಗೊಳ್ಳುತ್ತದೆ. ಈ ಹಬ್ಬದಲ್ಲಿ ತೊಗಲುಗೊಂಬೆಯಾಟ, ಜನಪದ ನೃತ್ಯಗಳು, ಒಂಟೆಯ ಓಟ ಮತ್ತು ಬಯಲು ಸಾಂಸ್ಕೃತಿಕ ಪ್ರದರ್ಶನಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.