ಜೈಸಲ್ಮೇರಿನ ಕೋಟೆಯ ಹೊರಭಾಗದಲ್ಲಿರುವ ಮನಕ್ ಚೌಕ್ ಮತ್ತು ಹವೇಲಿಗಳು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಈ ಹವೇಲಿಗಳನ್ನು ಸುಂದರವಾದ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳಿಂದ ಶೃಂಗಾರಗೊಳಿಸಲಾಗಿರುತ್ತದೆ. ಈ ಹವೇಲಿಗಳಲ್ಲಿ ಪಟ್ವೋಂ- ಕಿ – ಹವೇಲಿ, ಸಲೀಂ ಸಿಂಗ್ – ಕಿ- ಹವೇಲಿ ಮತ್ತು ನಾಥ್ ಮಲ್ಜಿ – ಕಿ- ಹವೇಲಿಗಳು ಅತ್ಯಂತ ಪ್ರಸಿದ್ಧ ಸ್ಮಾರಕಗಳಾಗಿವೆ.ಇಲ್ಲಿನ ಒಟ್ಟಾರೆ ಮಾರುಕಟ್ಟೆ ಪ್ರದೇಶವನ್ನು ’ ಸದರ್ ಮಂಡಿ’ ಎಂದು ಕರೆಯಲಾಗುತ್ತದೆ. ಒಂದಾನೊಂದು ಕಾಲದಲ್ಲಿ ಇದೊಂದು ಪ್ರಸಿದ್ಧ ಧಾನ್ಯದ ಮಾರುಕಟ್ಟೆಯಾಗಿದ್ದು, ಇರಾಕ್, ಈಜಿಪ್ಟ್, ಪರ್ಷಿಯಾ ಮತ್ತು ಅರೇಬಿಯಾ ದೇಶಗಳಿಂದ ವರ್ತಕರು ಇಲ್ಲಿಗೆ ಆಗಮಿಸುತ್ತಿದ್ದರು. ಮನಕ್ ಚೌಕ್ ಮಾರುಕಟ್ಟೆ ಪ್ರದೇಶದಲ್ಲಿದ್ದು ಅಲಂಕಾರಯುತವಾದ ಚರ್ಮದ ವಸ್ತುಗಳಿಗೆ, ಸಾಂಪ್ರದಾಯಿಕವಾದ ಬೆಳ್ಳಿಯ ಆಭರಣಗಳಿಗೆ , ಕುಸುರಿ ಕಲೆಯ ವಸ್ತುಗಳಿಗೆ ಮತ್ತು ಪುರಾತನ ಕಾಲದ ಕಲಾ ವಸ್ತುಗಳನ್ನು ಕೊಳ್ಳಲು ಬಯಸುವವರ ನೆಚ್ಚಿನ ತಾಣವಾಗಿದೆ. ಇದೊಂದು ಅಪರೂಪವಾದ ಮಾರುಕಟ್ಟೆ ಪ್ರದೇಶವಾಗಿದ್ದು, ಇಲ್ಲಿ ಪ್ರವಾಸಿಗರು ಸ್ಥಳೀಯ ಕಲಾವಿದರು ಕಲಾ ವಸ್ತುಗಳನ್ನು ಹೇಗೆ ತಯಾರಿಸುತ್ತಾರೆ ಎಂಬ ಪ್ರಕ್ರಿಯೆಯನ್ನು ಪ್ರತ್ಯಕ್ಷವಾಗಿ ನೋಡಬಹುದಾಗಿದೆ.


Click it and Unblock the Notifications