ಕುಲ್ಧಾರ ಎಂಬುದು ಪ್ರಸಿದ್ಧವಾದ ಐತಿಹಾಸಿಕ ಹಳ್ಳಿಯಾಗಿದ್ದು, ಜೈಸಲ್ಮೇರ್ ನಗರದಿಂದ 25 ಕಿ.ಮೀ ದೂರದಲ್ಲಿದೆ. ಇದೊಂದು ಭೂತಬಂಗಲೆಯಂತ ಊರಾಗಿದೆ. ಈ ಊರಿಗೆ ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತಕ್ಕೆ ನಡುವೆ ಮಾತ್ರ ಪ್ರವೇಶಿಸುವ ಅವಕಾಶವನ್ನು ನೀಡಲಾಗುತ್ತದೆ. ಇಲ್ಲಿ 200 ವರ್ಷಗಳಷ್ಟು ಹಳೆಯದಾದ ಮಣ್ಣಿನ ಮನೆಗಳನ್ನು ಕಾಣಬಹುದು. ಇತಿಹಾಸದ ಪ್ರಕಾರ ಈ ಊರಿನಲ್ಲಿ ಪಲಿವಾಲ್ ಬ್ರಾಹ್ಮಣರು ಸುಮಾರು 500 ವರ್ಷಗಳಷ್ಟು ಕಾಲದವರೆಗೆ ಜೀವಿಸಿದ್ದರಂತೆ. ಆದರೆ ಅವರನ್ನು ಇಲ್ಲಿನ ಕ್ರೂರ ಆಡಳಿತಗಾರರು ಇಲ್ಲಿಂದ ಬಲವಂತವಾಗಿ ಒಕ್ಕಲೆಬ್ಬಿಸಲು ತೊಡಗಿದರು. ಆಗ ಪಲಿವಾಲ್ ಬ್ರಾಹ್ಮಣರು ಶಾಪನೀಡಿದ ಪರಿಣಾಮವಾಗಿ ಊರು ಶಾಪಗ್ರಸ್ಥವಾಯಿತೆಂದು ಜನರು ಈಗಲೂ ನಂಬುತ್ತಾರೆ.


Click it and Unblock the Notifications