ಖುರಿ ಸ್ಯಾಂಡ್ ಡ್ಯೂನ್ಸ್ ಎಂಬುದು ಜೈಸಲ್ಮೇರ್ ನಗರದಿಂದ 42 ಕಿ.ಮೀ ದೂರದಲ್ಲಿರುವ ಖುರಿ ಹಳ್ಳಿಯಲ್ಲಿದೆ. ಪ್ರವಾಸಿಗರು ಇಲ್ಲಿನ ಗೋಲ್ಡನ್ ಸ್ಯಾಂಡ್ ಡ್ಯೂನ್ಸ್ ನಲ್ಲಿ ಒಂಟೆ ಸಫಾರಿಯ ಮೋಜನ್ನು ಅನುಭವಿಸಬಹುದು. ಸಫಾರಿಗಾಗಿ ಒಂಟೆಗಳನ್ನು ಕಲಾತ್ಮಕವಾಗಿ ಶೃಂಗರಿಸಲಾಗಿರುತ್ತದೆ. ಇಲ್ಲಿರುವ ಮನೆಗಳನ್ನು ಮಣ್ಣಿನಿಂದ ಮತ್ತು ಜೊಂಡಿನಿಂದ ನಿರ್ಮಿಸಲಾಗಿದೆ. ಇದು ಇಡೀ ಪ್ರದೇಶಕ್ಕೆ ಒಂದು ಬಗೆಯ ಸಾಂಪ್ರದಾಯಿಕವಾದ ಕಳೆಯನ್ನು ನೀಡಿದೆ. ಸಂಜೆಯ ಶಿಬಿರಾಗ್ನಿಗಳು ಮತ್ತು ಜನಪದ ಹಾಡುಗಳು ಹಾಗು ಕಲ್ಬೆಲಿಯ ನೃತ್ಯಗಳು ಜೈಸಲ್ಮೇರಿನ ಭೇಟಿಯನ್ನು ಮರೆಯಲಾಗದ ಅನುಭವವನ್ನಾಗಿ ಮಾಡುತ್ತವೆ. ಪ್ರವಾಸಿಗರು ಜೈಸಲ್ಮೇರ್ ನಿಂದ ಖುರಿ ಹಳ್ಳಿಗೆ ಬಸ್ಸುಗಳ ಮೂಲಕ ತಲುಪಬಹುದು.


Click it and Unblock the Notifications