ಶೀಲಾ ದೇವಿ ದೇವಸ್ಥಾನವು ಕಾಳಿ ಮಾತೆಗೆ ಅರ್ಪಿತವಾದದ್ದು. ಇದು ಅಂಬರ್ ಕೋಟೆಯ ಒಳಗಿದೆ. 16ನೇ ಶತಮಾನದಲ್ಲಿ ರಾಜ ಮಾನ್ ಸಿಂಗ್ ಬಂಗಾಳದಿಂದ ಈ ಮೂರ್ತಿಯನ್ನು ತಂದ. ಕಾಳಿ ಮಾತೆಯ ನಿಷ್ಠ ಭಕ್ತನಾಗಿದ್ದ ಈತ. ಈ ದೇವಸ್ಥಾನವನ್ನು ಬಿಳಿ ಮಾರ್ಬಲ್ನಿಂದ ನಿರ್ಮಿಸಲಾಗಿದೆ. ಕಾಳಿ ಮಾತೆಯು ಅಂಬರ್ ಕೋಟೆಯ ರಕ್ಷಕಿ ಎಂದು ನಂಬಲಾಗಿದೆ. ಹಿಂದೂ ಹಬ್ಬವಾದ ನವರಾತ್ರಿಯನ್ನು ಇಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.