ಜೊವಾಯಿಯಿಂದ ಎಂಟು ಕಿ.ಮೀ. ದೂರದಲ್ಲಿ ಲಾಲೊಂಗ್ ಪಾರ್ಕ್ ಇದೆ. ಇದು ಪವಿತ್ರ ತೋಪುಗಳನ್ನು ಹೊಂದಿದ್ದು, ಭೇಟಿಗೆ ಒಂದು ಮನೋಜ್ಞ ಕಾರಣವಾಗಿದೆ. ಇಷ್ಟು ಮಾತ್ರವಲ್ಲದೆ ರಮಣೀಯ ಕಣಿವೆಗಳು ಕಣ್ಮನ ಸೆಳೆಯುತ್ತದೆ. ಈ ಪಾರ್ಕ್ ನ್ನು ಆಗಾಗ ನವೀಕರಿಸಲಾಗಿದೆ ಮತ್ತು ಜಿಲ್ಲಾಡಳಿತ ತೆಗೆದುಕೊಂಡು ವಿಶೇಷ ಡಿಆರ್ ಡಿಎ ಪ್ರವಾಸೋದ್ಯಮ ಯೋಜನೆಯಡಿಯಲ್ಲಿ ಇದನ್ನು ಮತ್ತಷ್ಟು ಸುಂದರವಾಗಿಸಲಾಗಿದೆ.
ಲಾಲೊಂಗ್ ಪಾರ್ಕ್ ನ್ನು ಪ್ರವಾಸಿಗಳ ಕೇಂದ್ರವನ್ನಾಗಿ ಮಾಡಲು ವಾಟರ್ ಇಕೊ-ಪಾರ್ಕ್ ನಿರ್ಮಾಣವಾಗುತ್ತಿದೆ. ಈ ಪಾರ್ಕ್ ನೊಂದಿಗೆ ನೀರಿನ ಅಣೆಕಟ್ಟು, ಶೌಚಾಲಯ, ಚಾನೆಲ್, ಬಟ್ಟೆ ಬದಲಾಯಿಸುವ ಕೊಠಡಿ ಮುಂತಾದವುಗಳಿವೆ. ಮೇಘಾಲಯದ ಕೆಲವು ಸ್ಥಳೀಯ ಪುಷ್ಪಗಳು ಸಹಿತ ವಿಭಿನ್ನ ಬಗೆಯ ಪುಷ್ಪರಾಶಿ ಪಾರ್ಕ್ ನಲ್ಲಿದೆ.
ಹುಲ್ಲಿನ ಇಳಿಜಾರಿನಲ್ಲಿ ಕುಳಿತುಕೊಂಡು ಕಣಿವೆಯಲ್ಲಿ ಸೂರ್ಯಾಸ್ತವನ್ನು ವೀಕ್ಷಿಸಬಹುದಾಗಿದೆ. ಲಾಲೊಂಗ್ ಪಾರ್ಕ್ ನ್ನು ಮೇಘಾಲಯದಲ್ಲಿ ಮನೋರಂಜನೆ ನೀಡುವ ಅತ್ಯುತ್ತಮ ಪಾರ್ಕ್ ಗಳಲ್ಲಿ ಒಂದಾಗಿದೆ. ನವಂಬರ್ ನಿಂದ ಜೂನ್ ತನಕ ಇಲ್ಲಿಗೆ ಭೇಟಿ ನೀಡಬಹುದು ಮತ್ತು ಶಿಲ್ಲಾಂಗ್ ನಿಂದ ಬಾಡಿಗೆ ಕಾರನ್ನು ಪಡೆದು ಇಲ್ಲಿಗೆ ಪ್ರಯಾಣಿಸಬಹುದು.


Click it and Unblock the Notifications