ಜಬಲ್ಪೂರ ಮತ್ತು ಮಧ್ಯಪ್ರದೇಶದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು ಈ ಧುವಾದಾರ್ ಜಲಪಾತ. ಹತ್ತು ಮೀಟರ್ ಎತ್ತರದಿಂದ ಧುಮ್ಮಿಕ್ಕುವ ನರ್ಮದಾ ನದಿಯ ಈ ಜಲಪಾತ ನೋಡಲು ತುಂಬ ಸುಂದರವಾಗಿದೆ. ಈ ಜಲಪಾತವು ಅಮೃತ ಶಿಲೆಗಳ ಮೇಲೆ ಹರಿಯುತ್ತಾ ಆರ್ಭಟಿಸುತ್ತಾ ಧುಮ್ಮಿಕುವುದನ್ನು ನೋಡಲು ಸುಂದರವಾಗಿರುತ್ತದೆ. ಜಲಪಾತ ಧುಮ್ಮಿಕ್ಕುವಾಗ ಮಂಜಿನ ಮುಸುಕನ್ನು ಸೃಷ್ಟಿಸುತ್ತದೆ ಇದೇ ಧುವಾ(ಹಿಂದಿಯಲ್ಲಿ ಧುವಾ ಎಂದರೆ ಹೊಗೆ) ಆದ್ದರಿಂದಲೇ ಇದಕ್ಕೆ ಧುವಾದಾರ್ ಜಲಪಾತವೆಂದು ಹೆಸರು. ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಾರೆ. ಇದು ಜಬಲ್ಪೂರದಿಂದ 25 ಕಿಮೀ ದೂರದಲ್ಲಿದೆ.


Click it and Unblock the Notifications