ಮಣಿಪುರ ಝೂವಲಾಜಿಕಲ್ ಗಾರ್ಡನ್ಸ್ ವಿಶೇಷವಾಗಿ ಅಪರೂಪದ ತಳಿಗಳ ಸಂರಕ್ಷಣೆಗಾಗಿ ನಿರ್ಮಾಣ ಮಾಡಲಾಗಿದೆ. ಇಂಫಾಲ್ ನಿಂದ 8 ಕಿ.ಮೀ ದೂರದಲ್ಲಿ ಕಂಗ್ ಚುಪ್ ರಸ್ತೆಯಲ್ಲಿರುವ ಮಣಿಪುರ ಝೂವಲಾಜಿಕಲ್ ಉದ್ಯಾನ ಎಂಟು ಹೆಕ್ಟೇರ್ವಿಸ್ತೀರ್ಣವನ್ನು ಹೊಂದಿದೆ. ಇದು ನಿಜವಾಗಿಯೂ ಕೆಲವು ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಪಕ್ಷಿ ಜಾತಿಗಳ ಮನೆಯಾಗಿದೆ ಆದ್ದರಿಂದಲೇ ಇದನ್ನು ಮಣಿಪುರದ ಜ್ಯುವೆಲ್ ಬಾಕ್ಸ್ ಎಂದೇ ಕರೆಯಲಾಗುತ್ತದೆ. ಮಣಿಪುರ ಝೂವಲಾಜಿಕಲ್ ಗಾರ್ಡನ್ಸ್ನಲ್ಲಿ ಕಂಡುಬರುವ ಸಂರಕ್ಷಿತ ಪ್ರಭೇದಗಳ ಪೈಕಿ, ಬಾಗಿದ ಮತ್ತು ಕವಲು ಕೊಂಬುಗಳಿರುವ ಥಯಮಿನ್ ಜಿಂಕೆ (Sangai)ಜನಪ್ರಿಯವಾಗಿದೆ. ಇಲ್ಲಿ 55 ಕ್ಕಿಂತ ಹೆಚ್ಚು ಪಕ್ಷಿಗಳು ಮತ್ತು 420ಕ್ಕೂ ಹೆಚ್ಚು ರೀತಿಯ ಪ್ರಾಣಿಗಳನ್ನು ಕಾಣಬಹುದು. ಇದು ಸುಮಾರು 14 ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ.
ಉದ್ಯಾನದ ದಕ್ಷಿಣದಲ್ಲಿ ಮಣಿಪುರ ಕೃಷಿ ವಿಶ್ವವಿದ್ಯಾಲಯ, ಪಶ್ಚಿಮದಲ್ಲಿ ಲಂಗೊಲ್ ರಸ್ತೆ ಹಾಗೂ ಉದ್ಯಾನದ ಇತರ ಭಾಗಗಳಲ್ಲಿ ಭತ್ತ ಬೆಳೆಯುವ ಕ್ಷೇತ್ರ ಆವರಿಸಿದೆ. ಮಣಿಪುರ ಝೂವಲಾಜಿಕಲ್ ಗಾರ್ಡನ್ಸ್ ಹಚ್ಚ ಹಸಿರಿನಿಂದ ಕೂಡಿದೆ. ದಣಿದಶರೀರಗಳಿಗೆ ಒಂದು ಹಿತವಾದ ಅನುಭವ ಇಲ್ಲಿ ಸಿಗುತ್ತದೆ. ಈ ಸ್ಥಳದಲ್ಲಿ ಒಂದು ಇಡೀ ದಿನವನ್ನು ಚೆನ್ನಾಗಿ ಕಳೆಯಬಹುದು.


Click it and Unblock the Notifications