ಇಗತ್ಪುರಿಯ ಅತ್ಯಂತ ಪ್ರಸಿದ್ಧ ಹಾಗೂ ಪೂಜ್ಯನೀಯ ಧಾರ್ಮಿಕ ತಾಣ ಘಾತಂದೇವಿ ಮಂದಿರ. ಘಾತನ್ ದೇವಿಗೆ ಮೀಸಲಾದ ಮಂದಿರವಿದು. ಸ್ಥಳೀಯ ನಂಬಿಕೆ ಪ್ರಕಾರ, ಇಗತ್ಪುರಿ ಹಾಗೂ ಈ ಘಟ್ಟ ಪ್ರದೇಶವನ್ನು ಕಾಯುತ್ತಿರುವವಳು, ಕಾಪಾಡುತ್ತಿರುವವಳು ಇದೇ ಘಾತನ್ ದೇವಿ. ಪಶ್ಚಿಮ ಘಟ್ಟದ ಪರ್ವತಗಳಾದ ಉತ್ವಂದ, ಹರಿಹರ ಹಾಗೂ ದುರವರಗಳು ಇಲ್ಲಿಂದ ನೋಡಲು ಸಿಗುತ್ತವೆ. ಇಲ್ಲಿಂದ ಅವನ್ನು ನೋಡಿದರೆ ಶ್ರೇಯಸ್ಸು ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಧಾರ್ಮಿಕ ಆಚರಣೆಗೆ ಹಾಗೂ ಸ್ಥಳ ವೀಕ್ಷಣೆಗೆ ಇಲ್ಲಿಗೆ ಸಾಕಷ್ಟು ಜನ ನಿತ್ಯ ಬರುತ್ತಾರೆ.


Click it and Unblock the Notifications