ಇಡುಕ್ಕಿಯ ಪ್ರವಾಸೀ ತಾಣಗಳ ಪೈಕಿ ರಾಮಕ್ಕಾಲಮೆಡು ಕೂಡ ಒಂದಾಗಿದೆ. ಇದು ಐತಿಹಾಸಿಕ ಪ್ರಾಮುಖ್ಯತೆಯನ್ನೂ ಹೊಂದಿರುವ ಸುಂದರವಾದ ಗಿರಿಧಾಮ. ಕುರಥಿ ಪ್ರತಿಮೆ ಮತ್ತು ಕುರವಾರ್ ಸ್ಮಾರಕ ಇರುವುದು ಇಲ್ಲಿಯೇ. ರಾವಣ ಸೀತೆಯನ್ನು ಅಪಹರಿಸಿದ ಸಂದರ್ಭದಲ್ಲಿ ರಾಮ ಸೀತೆಯನ್ನು ಹುಡುಕುತ್ತಾ ಇಲ್ಲಿಗೆ ಬಂದಿದ್ದ ಎಂಬ ನಂಬಿಕೆ ಇಲ್ಲಿನವರಲ್ಲಿ ಇದೆ. ಇದೇ ಕಾಣಕ್ಕಾಗಿಯೇ ಈ ಪ್ರದೇಶಕ್ಕೆ ರಾಮಕ್ಕಲಮೇಡು ಎಂದು ಹೆಸರು ಬಂದಿದೆ. ಸಮುದ್ರ ಮಟ್ಟಕ್ಕಿಂತಲೂ 3500 ಅಡಿಗಳಷ್ಟು ಎತ್ತರದಲ್ಲಿರುವ ಈ ಗಿರಿಧಾಮದ ಮೂಲಕವಾಗಿ ಕೇರಳಾ ಮತ್ತು ತಮಿಳುನಾಡುಗಳ ಅನೇಕ ಪ್ರದೇಶಗಳನ್ನು ನೋಡಬಹುದಾಗಿದೆ. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಮುಗ್ಧ ಪರ್ವತಗಳು ಭಾವನೆಗಳನ್ನು ಉದ್ದೀಪಿಸುವಂತಿವೆ. ಪಶ್ಚಿಮ ಘಟ್ಟ ಸರಣಿಯ ಈ ಪರ್ವತಗಳು ತಂಪಾದ ಹವೆಯಿಂದ ಕೂಡಿದ್ದು, ಮನಕ್ಕೆ ಆನಂದವನ್ನು ನೀಡುತ್ತದೆ. ಇಲ್ಲಿ ಪವನ ವಿದ್ಯುತ್ ಕೇಂದ್ರಗಳನ್ನೂ ಸ್ಥಾಪಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ.


Click it and Unblock the Notifications