ಪೈನಾವು ಇಡುಕ್ಕಿಯ ಇನ್ನೊಂದು ಪ್ರಮುಖ ಕೇಂದ್ರ. ವಾಣಿಜ್ಯ, ವ್ಯಾಪಾಕ್ಕೆ ಹೆಸರುವಾಸಿಯಾದ ಪ್ರದೇಶ. ಇಲ್ಲಿಂದ 7 ಕಿಲೋಮೀಟರ್ ಅಂತರದಲ್ಲಿ ಇಡುಕ್ಕಿಯ ಕಮಾನು ಆಣೆಕಟ್ಟು ಮತ್ತು ಚೆರುಥೋಣಿ ಆಣೆಕಟ್ಟುಗಳಿವೆ. ಸದಾ ದಟ್ಟಣೆಯಿಂದ ಕೂಡಿದ್ದರೂ, ಇಲ್ಲಿನ ವಿಶಿಷ್ಠವಾದ ವಾತಾವರಣ, ಸೌಂದರ್ಯ ಮನಸೆಳೆಯುತ್ತದೆ. ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ಕಾಡುಗಳು ಎಂಥವರಲ್ಲೂ ಬೆರೆಗು ಮೂಡಿಸುತ್ತದೆ. ಈ ಕಾಡಿನಲ್ಲಿ ಚಾರಣ ಮಾಡುವುದು ಒಂದು ಸುಂದರವಾದ ಅನುಭವ. ಸೆಪ್ಟೆಂಬರ್ ನಿಂದ ಜನವರಿವರೆಗೆ ಇಲ್ಲಿಗೆ ಆಗಮಿಸಲು ಸೂಕ್ತವಾಗಿದೆ.