ಹೊಗೇನಕಲ್ ಜಲಪಾತವು ತಮಿಳುನಾಡಿನ ಧರ್ಮಪುರಿಜಿಲ್ಲೆಯ ಕಾವೇರಿ ನದಿಯ ಹತ್ತಿರ ಇದೆ, ಬೆಂಗಳೂರಿನಿಂದ ಸುಮಾರು 180 ಕಿ ಮೀ ದೂರದಲ್ಲಿದೆ. ಇದನ್ನು ಭಾರತದ ನಯಾಗರ ಜಲಪಾತವೆಂದೆ ಕರೆಯುತ್ತಾರೆ. ವಿಶೇಷ ಔಷಧೀಯ ಗುಣಗಳಿರುವ ಇಲ್ಲಿನ ನೀರು, ವಿಶೇಷ ಹಾಯಿದೋಣಿ ಸವಾರಿಗೂ ಹೆಸರುವಾಸಿಯಾಗಿದೆ. ಇಲ್ಲಿ ಸಿಗುವ ಕಾರ್ಬೊನೇಟ್ ಕಲ್ಲುಗಳು ಇಡೀ ಪ್ರಪಂಚದಲ್ಲಿ ತುಂಬಾ ಹಳೆಯದೆಂದು ವಿಶ್ಲೆಷಿಸಲಾಗಿದೆ. ಬೇಸಿಗೆಯ ಸಮಯದಲ್ಲಿ ಪ್ರಬಲವಾದ ನೀರಿನ ಪ್ರವಾಹ ಇಲ್ಲದಿರುವುದರಿಂದ ವಿಶೇಷ ಹಾಯಿದೋಣಿಯು, ಪ್ರವಾಸಿಗರನ್ನು ಸವಾರಿಗೆ ಕರೆದುಕೊಂಡು ಹೋಗುತ್ತದೆ. ಆಗತಾನೆ ಹಿಡಿದ ಮೀನನ್ನು ಹಾಯಿದೋಣಿಯಲ್ಲಿ ಅಥವಾ ಕಮರಿಯಲ್ಲಿ ತೆಗೆದುಕೊಳ್ಳಬಹುದು. ಇಲ್ಲಿನ ಸ್ಥಳೀಯ ಜನರು ಶುದ್ದವಾದ ನೀರು, ತಿನಿಸುಗಳ ಮಾರಟಮಾಡುವುದು ಇಲ್ಲಿ ಸಾಮಾನ್ಯವಾಗಿರುತ್ತದೆ. ಇಲ್ಲಿ ಸಿಗುವ ತಾಜ ಮೀನನ್ನು ಇಲ್ಲೆ ಇರುವ ಅಡುಗೆ ಕೋಣೆಗಳಲ್ಲಿ ಬೇಯಿಸಿಕೊಳ್ಳಬಹುದು.


Click it and Unblock the Notifications