ಬಹುಶಹ ಶಿವನಿಗೆ(ಪ್ರಸನ್ನ ವಿರೂಪಾಕ್ಷ) ಅರ್ಪಿತವಾದ ಈ ದೇವಾಲಯವನ್ನು ಇಲ್ಲಿಗೆ ಬರುವ ಯಾವೋಬ್ಬ ಪ್ರವಾಸಿಗರು ತಪ್ಪಿಸಿಕೊಳ್ಳಲಾರರು. ಈ ದೇವಾಲಯವನ್ನು ಭೂಮಿಯ ಕೆಳಗಡೆ ಕಟ್ಟಲಾಗಿದ್ದು, ಇದರ ಮುಖ್ಯ ಭಾಗಗಳು ಸುಮಾರು ಕಾಲ ಯಾವಾಗಲೂ ನೀರಿನಲ್ಲೇ ಇರುತ್ತವೆ. ಇದರ ಒಳಭಾಗಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದ್ದು, ಕೆಲವು ಭಾಗಗಳಿಗೆ, ಒಣಗಿದ ಕಾಲುವೆಯ ಮುಖಾಂತರ ಹೋಗಿ ಭೇಟಿ ನೀಡಬಹುದಾಗಿದೆ. ಹಂಪಿಯಲ್ಲಿರುವ ಪ್ರಾಚೀನ ದೇವಾಲಗಳಲ್ಲಿ ಈ ಭೂಗತ ದೇವಾಲಯವು ಕೂಡ ಒಂದಾಗಿದ್ದು, ಜನಪ್ರೀಯ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸ್ಥಳವು ಮುಖ್ಯ ರಸ್ತೆಯಲ್ಲಿರುವ ನೋಬಲಮೆನ್ ಕ್ವಾರ್ಟರ್ಸನ ಹತ್ತಿರದಲ್ಲಿದ್ದು ಹಂಪಿಯ ಬಸ ನಿಲ್ದಾಣಕ್ಕೆ ಸನಿಹವಾಗಿದೆ. ಪ್ರವಾಸಿಗರು, ಆವರಣದ ಮುಂಭಾಗದಲ್ಲಿರುವ ಮುಖ್ಯ ಗೋಪುರದ ಮುಖಾಂತರ ಇಲ್ಲಿ ಪ್ರವೇಶಿಸಬಹುದಾಗಿದೆ. ಈ ಸ್ಥಳದಲ್ಲಿರುವ ಎತ್ತರದ ಮೆಟ್ಟಿಲುಗಳ ಮುಖಾಂತರ, ದೇವಾಲಯಕ್ಕೆ ಪ್ರವೇಶಿಸಬಹುದಾಗಿದೆ. ದೇಗುಲದ ಎದುರುಗಡೆ ಮುಖ್ಯ ಕೊಠಡಿಯಿದ್ದು ಅದರ ಛಾವಣಿಯು ಚೌಕಾಕಾರವಾಗಿ ಖಂಬಗಳ ಮೇಲೆ ಆಧಾರಿತವಾಗಿದೆ. ಆಯಾಕಾಲಕ್ಕನುಸಾರವಾಗಿ, ಅಲ್ಲಿರುವ ನೀರಿನ ಪ್ರಮಾಣಕ್ಕನುಗುಣವಾಗಿ ಪ್ರವಾಸಿಗರು ಇದನ್ನು ನೋಡಬಹುದಾಗಿದೆ. ಗುಡಿಯ ಸುತ್ತಲೂ ಸುಂದರವಾದ ಹುಲ್ಲಿನ ಹಾಸಿಗೆಯನ್ನು ಕಾಣಬಹುದು.


Click it and Unblock the Notifications