ರಾಜರ ತುಲಾಭಾರ ಅಥವಾ ತುಲ ಪುರುಷಾದನ ಎಂದೇ ಪ್ರಸಿದ್ಧಿಯಾದ ಇದು ವಿಜಯವಿಟ್ಠಲ ದೇವಾಲಯದ ನೈರುತ್ಯ ಭಾಗದಲ್ಲಿದೆ. ಆಗಿನ ಸ್ಥಳೀಯ ಆಡಳಿತಗಾರರು ತಮ್ಮನ್ನು ತಾವೇ,ಧಾನ್ಯ,ಬಂಗಾರ,ಬೆಳ್ಳಿ,ಮುತ್ತುರತ್ನಗಳಿಂದ ತೂಗಿಸಿಕೋಳ್ಳುತ್ತಿದ್ದರಿಂದ ಈ ಹೆಸರು ಬಂದಿದೆ. ಈ ಬಗೆಯ ಆಚರಣೆಯು ವಿಶೇಷವಾಗಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳಲ್ಲಿ ಜರುಗುತ್ತಿದ್ದು,ತೂಗಿಸಿಕೊಂಡಂಥ ರಾಜನ ತೂಕಕ್ಕೆ ಸಮನಾದ ವಸ್ತುಗಳನ್ನು ಅರ್ಚಕರು ಅಥವಾ ಪುರೋಹಿತರಿಗೆ ದಾನದಲ್ಲಿ ನೀಡಲಾಗುತ್ತಿತ್ತು. ಈ ರೀತಿಯಾದ ವಿಸ್ಮಯದ ಇತಿಹಾಸವನ್ನು ಹೊಂದಿರುವಂತಹ ಈ ತಾಣವು ಕೂಡ ಜನಪ್ರೀಯವಾಗಿದೆ. ಇಲ್ಲಿ ಎರಡು 15ಅಡಿ ಎತ್ತರದ ಗ್ರಾನೈಟ್ ಕಲ್ಲಿನ ಖಂಬಗಳಿದ್ದು,ಅದರ ಮೇಲೆ 12ಅಡಿ ಉದ್ದದ ಕಲ್ಲಿನ ಖಂಬವನ್ನು ಇಡಲಾಗಿದೆ. ಇದರ ಕೆಳಭಾಗದಲ್ಲಿ 3 ಸುರುಳಿಗಳನ್ನು ಕಾಣಬಹುದು. ಈ ಎರಡು ಖಂಬಗಳ ಪೈಕಿ ಒಂದರಲ್ಲಿ, ರಾಜನ ಹಾಗು ಅವನ ಇಬ್ಬರು ರಾಣಿಯರ ಉಬ್ಬು ಚಿತ್ರಗಳನ್ನು ರಚಿಸಲಾಗಿದ್ದು, ಅವುಗಳು ಕೄಷ್ಣ್ದೇವರಾಯ ಹಾಗು ಅವನ ಇಬ್ಬರು ಹೆಂಡತಿಯರ ಚಿತ್ರಗಳೆಂದು ವಿಶ್ಲೇಷಿಸಲಾಗಿದೆ. ಇದು ಕಂಪ ಭೂಪನ ಮಾರ್ಗದ ಅಂತ್ಯದಲ್ಲಿದ್ದು ವಿಜಯವಿಟ್ಠಲ ದೇವಾಲಯದ ಹತ್ತಿರದಲ್ಲಿದೆ.


Click it and Unblock the Notifications