Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು » ತಾನಸೇನನ ಸ್ಮಾರಕ

ತಾನಸೇನನ ಸ್ಮಾರಕ, ಗ್ವಾಲಿಯರ್

1

ತಾನಸೇನನ ಸ್ಮಾರಕವನ್ನು ತಾನಸೇನನ ಗೋರಿ ಎಂದೂ ಸಹ ಕರೆಯಲಾಗುತ್ತದೆ. ಇದು ಗ್ವಾಲಿಯರ್ನ ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿದೆ. ತನ್ನ ಗುರು ಮೊಹಮ್ಮದ ಗೌಸ್ ಸಮೇತವಾಗಿ ತಾನಸೇನನು ಇಲ್ಲಿ ಸಮಾಧಿಯಾಗಿದ್ದಾನೆ.

ತಾನಸೇನನು ಅಕ್ಬರನ ಆಸ್ಥಾನದಲ್ಲಿ ಪ್ರಮುಖ ಸಂಗೀತಗಾರನಾಗಿದ್ದನು. ಇವರು ಹಿಂದುಸ್ತಾನಿ ಸಂಗೀತದ ಆಗ್ರಮಾನ್ಯ ವ್ಯಕ್ತಿಯಾಗಿದ್ದರು. ಅಕ್ಬರ ಆಸ್ಥಾನದ ನವರತ್ನಗಳಲ್ಲಿ ಇವರು ಒಬ್ಬರಾಗಿದ್ದರು. ಇವರು ಕ್ರಿ.ಶ ಹದಿನೈದನೇ ಶತಮಾನದಲ್ಲಿ ಜೀವಿಸಿದ್ದರು. ಮೊಹಮ್ಮದ ಗೌಸ್ ಎಂಬ ಸೂಫಿ ಸಂತನು ತಾನಸೇನನ ಸಂಗೀತದ ಗುರುಗಳಾಗಿದ್ದರು. ಹೀಗಾಗಿ ತಾನಸೇನನು ಕೂಡ ಸೂಫಿ ಸಂಸ್ಕೃತಿಯನ್ನು ಅನುಕರಿಸಿದನು.

ತಾನಸೇನನು ಮೇಘಮಲ್ಹಾರ ರಾಗವನ್ನು ಹಾಡಲು ಶುರು ಮಾಡಿದನೆಂದರೆ ಅದನ್ನು ಕೇಳಲು ಮಳೆಯೇ ಸುರಿಯುತ್ತಿತ್ತು ಎಂದು ಪ್ರತೀತಿ ಇದೆ. ತಾನ್ಸೇನ್ ಸ್ಮಾರಕವು ಮೊಘಲ ವಾಸ್ತುಶಿಲ್ಪದ ಶೈಲಿಯ ಒಂದು ನಿರ್ದಿಷ್ಟ ಉದಾಹರಣೆಯಾಗಿದೆ. ಪ್ರತಿಷ್ಠಿತ ತಾನ್ಸೇನ್ ಸಂಗೀತೋತ್ಸವವನ್ನು ಪ್ರತಿವರ್ಷ ನವಂಬರ ಮತ್ತು ಡಿಸಂಬರ ಅವಧಿಯಲ್ಲಿ ಇಲ್ಲಿ ನಡೆಸಲಾಗುತ್ತದೆ. ಭಾರತದ ಮಹಾನ್ ಸಂಗೀತಗಾರರು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ.

One Way
Return
From (Departure City)
To (Destination City)
Depart On
17 Aug,Mon
Return On
18 Aug,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Aug,Mon
Check Out
18 Aug,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Aug,Mon
Return On
18 Aug,Tue