ದರ್ಗಾ ಖ್ವಾಜಾ ಕಾನೂನ್ ಸಾಹಿಬ್ ಇದು ಒಂದು ದರ್ಗಾ ಆಗಿದ್ದು ಖ್ವಾಜಾ ಕಾನೂನ್ ಸಾಹಿಬರ ನೆನೆಪಿನಲ್ಲಿ ನಿರ್ಮಿಸಲಾಗಿದೆ. ಸಾಹಿಬರು ಮಾರವಾರದಿಂದ ಗ್ವಾಲಿಯರ್ಕ್ಕೆ ಬಂದರು ಮತ್ತು ಗ್ವಾಲಿಯರ್ನಲ್ಲಿಯೇ ಮಡಿದರು. ಇಲ್ಲಿನ ಸ್ಥಳೀಯ ಪದ್ಧತಿ ಪ್ರಕಾರ, ಈ ದರ್ಗಾಕ್ಕೆ 40 ದಿನಗಳ ಕಾಲ ಭೇಟಿ ನೀಡಿದರೆ ಆ ವ್ಯಕ್ತಿಯ ಇಷ್ಟಾರ್ಥಗಳು ನೇರವೇರುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ಅನೇಕ ಭಕ್ತರು ಈ ದರ್ಗಾಕ್ಕೆ ವರ್ಷ ಪೂರ್ತಿ ಮೇಲಿಂದ ಮೇಲೆ ಭೇಟಿ ನೀಡುತ್ತಿರುತ್ತಾರೆ. ಖ್ವಾಜಾ ಕಾನೂನ್ ಸಾಹಿಬರು ಉನ್ನತ ಸಾಧನೆಯನ್ನು ಮಾಡಿದ ಸೂಫಿ ಸಂತರಾಗಿದ್ದರು. ಇವರನ್ನು ಅವರ ಅನುಯಾಯಿಗಳು ಖ್ವಾಜಾ ಕಾನೂನು ಎಂದು ಸಹ ಕರೆಯುತ್ತಿದ್ದರು. ಇಸ್ಲಾಮಿಕ ಕ್ಯಾಲೆಂಡರನ ಪ್ರಕಾರ, ಇವರು ಹಿಜರಿ ಶಕೆ 940 ರಲ್ಲಿ ತೀರಿ ಕೊಂಡರು.


Click it and Unblock the Notifications