ಗುಹಾಘರ್ ಕಡಲ ಕಿನಾರೆ ಒಂದು ಪ್ರಶಾಂತವಾದ ಸ್ಥಳವಾಗಿದ್ದು ತನ್ನ ಅಂಚಿನ ಗುಂಟ ಸುರು ಮರಗಳನ್ನು ಹೊಂದಿದೆ. ಇದು ಮಹಾರಾಷ್ಟ್ರ ರಾಜ್ಯ ಸರಕಾರದ ಗುಹಾಘರ್ ಸಾರಿಗೆ ಡಿಪೋದಿಂದ ಕೇವಲ 200 ಮೀ ದೂರದಲ್ಲಿದೆ.
ಇಲ್ಲಿನ ಕಡಲ ಕಿನಾರೆ ಬಿಳಿ ಮರಳು ಮತ್ತು ಮೋಡಿ ಮಾಡುವ ದೃಶ್ಯಾವಳಿಗೆ ಪ್ರಸಿದ್ಧವಾಗಿದೆ. ಇದು ಗುಹಾಘರ್ ಮುಖ್ಯ ಪಟ್ಟಣದ ಪಶ್ಚಿಮ ದಿಕ್ಕಿಗಿದೆ ಮತ್ತು ಬೀಚ್ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಇತರ ಚಟುವಟಿಕೆಗಳ ಜೊತೆಗೆ ಪ್ರವಾಸಿಗರು ಈಜಾಡುವುದು ಮತ್ತು ಸನ್ ಬಾಥಿಂಗ್ ಮಾಡಬಹುದಾಗಿದೆ.
ಇಲ್ಲಿನ ಕಡಲ ಕಿನಾರೆಯಲ್ಲಿ ಫಾಸ್ಟ್ ಫುಡ್ ಮತ್ತು ಚಾಟ್ ಅಂಗಡಿಗಳು ಸಾಕಷ್ಟು ಸಂಖ್ಯೆಯಲ್ಲಿ ಹರಡಿಕೊಂಡಿದ್ದು ರುಚಿಕರವಾದ ಆಹಾರಕ್ಕೆ ಪ್ರಸಿದ್ಧವಾಗಿದೆ. ಇಲ್ಲಿಯೇ ಸಮೀಪದಲ್ಲಿ ಒಂದು ದೊಡ್ಡ ಬಜಾರ್ ಇದ್ದು ನೀವಿಲ್ಲಿ ಹಾಯಾಗಿ ಖರಿದಿಸುತ್ತ ಸುತ್ತಾಡಬಹುದು.
ದಿನನಿತ್ಯದ ಚಟುವಟಿಕೆಗಳಿಂದ ವಿಶ್ರಾಂತಿ ಪಡೆಯಲು, ಸ್ವಲ್ಪ ಏಕಾಂತ ಮತ್ತು ಶಾಂತತೆ ಪಡೆಯಲು ಇಲ್ಲಿನ ಸ್ಥಳೀಯರು ಮತ್ತು ಪ್ರವಾಸಿಗರು ಈ ಸ್ಥಳವನ್ನು ಆರಿಸಿಕೊಳ್ಳುತ್ತಾರೆ. ನಿಮ್ಮ ಕುಟುಂಬದೊಂದಿಗೆ ಆರಾಮವಾಗಿ ಸಮಯ ಕಳೆಯಲು ಮತ್ತು ನೀವು ಪ್ರೀತಿಸುವವರೊಂದಿಗೆ ವಾರಾಂತ್ಯ ಕಳೆಯಲು ಇದು ಸೂಕ್ತವಾದ ತಾಣವಾಗಿದೆ.
ಇಲ್ಲಿನ ಕಡಲ ಕಿನಾರೆ ಮಕ್ಕಳೂ ಸೇರಿದಂತೆ ಎಲ್ಲರಿಗೂ ಅಪಾಯಕಾರಿಯಲ್ಲದ ಸ್ಥಳವಾಗಿದೆ. ಧ್ಯಾನ, ವಿರಾಮ, ಸನ್ ಬಾಥಿಂಗ್ ಮತ್ತು ಈಜಾಡುವುದು ನೀವು ಇಲ್ಲಿರುವಾಗ ಮಾಡಬಹುದಾದ ಪ್ರಮುಖ ಚಟುವಟಿಕೆಗಳಾಗಿವೆ.


Click it and Unblock the Notifications