Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಹಾಘರ್ » ಹವಾಮಾನ

ಗುಹಾಘರ್ ಹವಾಮಾನ

ಗುಹಾಘರ್ ವರ್ಷವಿಡಿ ಆಹ್ಲಾದಕರ ಹವಾಮಾನದ ಅನುಕೂಲತೆಯನ್ನು ಹೊಂದಿದೆ. ಮಳೆಗಾಲದ ನಂತರದ ಚಳಿಗಾಲದ ಅವಧಿ ಗುಹಾಘರ್ ಭೇಟಿಗೆ ಹೇಳೆಮಾಡಿಸಿದ ಕಾಲವಾಗಿದೆ.

ಬೇಸಿಗೆಗಾಲ

ಗುಹಾಘರ್ ನಲ್ಲಿ ಬೇಸಿಗೆ ಮಾರ್ಚ್ ತಿಂಗಳಿನಿಂದ ಮೇ ತಿಂಗಳ ತನಕ ಇರುತ್ತದೆ. ಈ ಅವಧಿಯಲ್ಲಿ ಉಷ್ಣಾಂಶ ಗರಿಷ್ಟ 38 ಡಿಗ್ರಿ ಸೆಲ್ಶಿಯಸ್ ತನಕ ತಲುಪುತ್ತದೆ. ಅರಬ್ಬೀ ಸಮುದ್ರಕ್ಕೆ ಸಮೀಪವಾಗಿರುವ ಅಂಶವನ್ನು ಗಮನಿಸಿದರೆ ಗುಹಾಘರ್ ಈ ಅವಧಿಯಲ್ಲಿ ಹೆಚ್ಚು ಆದ್ರತೆಯನ್ನು ಹೊಂದಿರುತ್ತದೆ. ಈ ಅವಧಿಯಲ್ಲಿ ಗುಹಾಘರ್ ನಲ್ಲಿನ ಸನ್ ಬಾಥಿಂಗ್ ಅನ್ನು ನೀವು ಖಂಡಿತ ಅನುಭವಿಸಬೇಕು.

ಮಳೆಗಾಲ

ಮಳೆಗಾಲ ಇಲ್ಲಿ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳ ತನಕ ಇರುತ್ತದೆ. ಇಲ್ಲಿ ಮಳೆಗಾಲದ ಅವಧಿಯಲ್ಲಿ ಭಾರಿ ಮಳೆಯಾಗುತ್ತದೆ. ಧಾರಾಕಾರವಾಗಿ ಸುರಿಯುವ ಇಲ್ಲಿನ ಮಳೆ ನಿಮ್ಮ ಸುತ್ತಾಟವನ್ನು ಪ್ರಭಾವಿಸುವ ಕಾರಣ ಈ ಅವಧಿಯಲ್ಲಿ ಇಲ್ಲಿಗೆ ಆಗಮಿಸದೆ ಇರುವುದು ಒಳಿತು.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರುವರಿ ತನಕದ ಅವಧಿ ಇಲ್ಲಿ ಚಳಿಗಾಲವಾಗಿರುತ್ತದೆ. ಈ ಅವಧಿಯಲ್ಲಿ ಉಷ್ಣಾಂಶ ಸುಮಾರು 18 ಡಿಗ್ರಿ ಸೆಲ್ಶಿಯಸ್ ತನಕ ಬರುತ್ತದೆ. ಈ ಋತುಮಾನ ಸಾಮಾನ್ಯವಾಗಿ ಆಹ್ಲಾದಕರವಾಗಿರುತ್ತದೆ ಮತ್ತು ಭೇಟಿ ನೀಡಲು ಸೂಕ್ತವಾದ ಅವಧಿಯಾಗಿದೆ.