ಚಂಡಿಕಾ ದೇವಿ ಮಂದಿರ ಭೂಮಿಯಡಿಯಲ್ಲಿನ ದೇವಾಲಯವಾಗಿದ್ದು ಭೂಮಿಯ 15-20 ಅಡಿ ಕೆಳಗೆ ಇದೆ. ಇದು ಗುಹಾಘರ್ ಮುಖ್ಯ ಪಟ್ಟಣದಿಂದ ಉತ್ತರಕ್ಕೆ ಸುಮಾರು 15 ಕಿ.ಮೀ ದೂರದಲ್ಲಿದೆ.
ಇದು ಸುಮಾರು ಮೂರು ಶತಮಾನಗಳ ಹಿಂದೆ ಪತ್ತೆಯಾಗಿದ್ದು ಇದರ ಸ್ಥಾಪನೆ ಅದಕ್ಕಿಂತಲೂ ಎಷ್ಟೋ ವರ್ಷಗಳ ಹಿಂದೆ ಆಗಿರಬಹುದು. ಇಲ್ಲಿ ಆರಾಧನೆ ಮಾಡುವ ಮೂರ್ತಿ ಉದ್ಭವ ಮೂರ್ತಿಯೆಂದು ನಂಬಲಾಗಿದ್ದು ಇದು ಮಾನವ ನಿರ್ಮಿತ ಮೂರ್ತಿಯಾಗಿಲ್ಲ ಎಂದು ತಿಳಿಯಲಾಗಿದೆ.
ಇಲ್ಲಿನ ಗುಹೆಯ ಹೊರಭಾಗದಲ್ಲಿ ಒಂದು ಸಮಾಧಿಯಿದ್ದು ಇದು ಈ ದೇವಾಲಯವನ್ನು ಕಂಡುಹಿಡಿದಾತನ ಸಮಾಧಿಯೆಂದು ನಂಬಲಾಗಿದೆ.


Click it and Unblock the Notifications