17ನೇ ಶತಮಾನದ ಈ ಸುಂದರ ವೈಭವಯುತ ಭವ್ಯಸೌಧ ಅತ್ಯಂತ ಪುರಾತನ ಕಟ್ಟಡಗಳಲ್ಲೊಂದಾಗಿದೆ. ಇದೊಂದು ಗೋಂಡಾಲಿನ ಪುರಾತನ ಕಾಲದ ಆಕರ್ಷಕ ಕಟ್ಟಡದ ನಿರ್ಮಾಣವೆಂದು ಹೇಳಬಹುದು. ಇದರಲ್ಲಿರುವ ಆಕರ್ಷಣೆಗಳೆಂದರೆ - ಅತ್ಯತ್ಭುತವಾಗಿ ಕೆತ್ತಲಾದ ಕಮಾನುಗಳು, ಆಕರ್ಷಕ ಬಾಲ್ಕನಿಗಳು, ಅಂಗಳಗಳು ಮತ್ತು ಸುರುಳಿಯಾಕಾರದ ಮೆಟ್ಟಲುಗಳು ಇವುಗಳಲ್ಲದೆ ಕಟ್ಟಡದೊಳಗಿರುವ ಒಂದು ಆಕರ್ಷಣೀಯ ಖಾಸಗಿ ಮ್ಯೂಸಿಯಂ.
ಅರಮನೆಯ ದರ್ಬಾರ್ ಹಾಲಿನಲ್ಲಿ ಇರುವ ಕುತೂಹಲಕಾರಿ ವಸ್ತುಗಳು ಯಾವುದೆಂದರೆ: ಕೆಲವು ಸುಂದರ ಕಲಾಕೃತಿಗಳು, ಹುಲ್ಲು ತುಂಬಿರುವ ಕಾಡುಪ್ರಾಣಿಗಳು, ಭವ್ಯ ಮರದ ಪೀಠೋಪಕರಣ, ಇತ್ಯಾದಿ. ಹಾಗೂ ಇಲ್ಲಿರುವ ಮ್ಯೂಸಿಯಮ್ಮಿನಲ್ಲಿ ಮಹಾರಾಜ ಭಗವತ್‍ಸಿಂಗ್‍ಜಿ ಅವರಿಗೆ ತನ್ನ ಆಳ್ವಿಕೆಯ ರಜತ ಸಂಭ್ರಮಾಚರಣೆಯ ಸಮಯದಲ್ಲಿ ಸಂದೇಶಗಳು ಮತ್ತು ಉಡುಗೊರೆಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಆಕರ್ಷಕ ಬೆಳ್ಳಿ ಪೆಟ್ಟಿಗೆಗಳು.


Click it and Unblock the Notifications