ಗಂಗೋತ್ರಿಯಿಂದ ಆರು ಕಿ.ಮೀ. ದೂರದಲ್ಲಿವೆ ಈ ನಂದನವನ ಹಾಗೂ ತಪೋವನ. ಗಂಗೋತ್ರಿ ಹಿಮಾಚ್ಛಾದಿತ ಪ್ರದೇಶದ ತಪ್ಪಲು ಭಾಗದ ಎದುರಿನಲ್ಲಿವೆ. ಈ ತಾಣವು ಶಿವಲಿಂಗ, ಭಾಗೀರಥಿ, ಕೇದಾರ್ ಡೋಮ್, ಥೇಲಿ ಸಾಗರ್ ಹಾಗೂ ಸುದರ್ಶನ ಮತ್ತಿತರ ತಾಣದ ಅತ್ಯಾಕರ್ಷಕ ನೋಟವನ್ನು ಸವಿಯಲು ಅವಕಾಶ ಮಾಡಿಕೊಡುತ್ತವೆ. ಈ ತಾಣವು ಸತೋಪತ್, ಕರ್ಚಕುಂಡ, ಕೈಲಡಿಕಾಲ, ಮೇರು ಹಾಗೂ ಕೇದಾರ್‌ಡೋಮ್ ತಪ್ಪಲಿಗೆ ತೆರಳುವ ಟ್ರೆಕ್ಕಿಂಗ್‌ಗೆ ಆರಂಭತಾಣವಾಗಿದೆ.
ಟ್ರೆಕ್ಕಿಂಗ್ ತೆರಳುವವರು ಬಾಗೀರಥಿ ನದಿ ಹರಿವು ಮಾರ್ಗವಾಗಿ ಗೋಮುಖದತ್ತ ತೆರಳಬೇಕು. ಇದು ಟ್ರೆಕ್ಕಿಂಗ್‌ನಲ್ಲಿ ಅತ್ಯಂತ ಪ್ರಮುಖ ಮಾರ್ಗಗಳಲ್ಲಿ ಒಂದು. ಇದು ಬೆಟ್ಟವೇರುವ ಆಕರ್ಷಕ ಅನುಭವಕ್ಕೆ ಹೇಳಿ ಮಾಡಿಸಿದ ತಾಣ. ಟ್ರೆಕ್ಕಿಂಗ್ ಮಾರ್ಗದುದ್ದಕ್ಕೂ ಆಕರ್ಷಕ ಪೈನ್ ಮರಗಳು ಹಾಗೂ ಬರ್ಚ್ ಶ್ರಬ್‌ಗಳನ್ನು ಕ್ರಮವಾಗಿ ಚಿರ್ಬಾಸಾ ಹಾಗೂ ಭೋಜಬಾಸಾಗಳಲ್ಲಿ ಕಾಣಬಹುದು. ಭೋಜಬಾಸಾದಿಂದ ಆರಂಭವಾಗುವ ಟ್ರೆಕ್ಕಿಂಗ್ ಲಂಕಾ ಹಾಗೂ ಗೋಮುಖದತ್ತ ತೆರಳುತ್ತದೆ. ಟ್ರೆಕ್ಕಿಂಗ್ ತೆರಳುವವರು ಗಂಗೋತ್ರಿ ಹಾಗೂ ಚತುರಗಿರಿ ಹಿಮಾಚ್ಛಾದಿತ ಬೆಟ್ಟದ ಸಾಲು ದಾಟಿಕೊಂಡು ಹೋಗಿ ನಂದನವನ ತಲುಪಬೇಕು. ಅಲ್ಲಿಂದ ಮುಂದೆ ಅಪಾರ ಹಾಗೂ ದಟ್ಟವಾಗಿ ವ್ಯಾಪಿಸಿರುವ ಹಸಿರಿನ ಮಾರ್ಗದಲ್ಲಿ ತಪೋವನ ತಲುಪಬೇಕು.


Click it and Unblock the Notifications