Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಮುಖ » ಆಕರ್ಷಣೆಗಳು » ಗಂಗೋತ್ರಿ ಹಿಮನದಿ(ಗ್ಲೇಸಿಯರ್)

ಗಂಗೋತ್ರಿ ಹಿಮನದಿ(ಗ್ಲೇಸಿಯರ್), ಗೋಮುಖ

1

ಗಂಗೋತ್ರಿ ಹಿಮಾಚ್ಛಾದಿತ ತಾಣವು ಹಿಮಾಲಯ ಪರ್ವತಗಳ ನಡುವೆ ಬರುತ್ತದೆ. ಇಲ್ಲಿನ ಹಿಮದ ಪ್ರಮಾಣ 27 ಕ್ಯುಬಿಕ್‌ ಕಿ.ಮೀ. ಇರುತ್ತದೆ. ಅಲ್ಲದೇ ಇದರ ಉದ್ದ ಹಾಗೂ ಅಗಲವು 30 ಕಿ.ಮೀ. ಹಾಗೂ ನಾಲ್ಕು ಕಿ.ಮೀ. ಇದೆ. ಈ ಪ್ರದೇಶವು ಹಿಮಾಚ್ಛಾದಿತ ಬೆಟ್ಟದ ತಪ್ಪಲುಗಳನ್ನು ಹೊಂದಿದೆ. ಇವುಗಳಲ್ಲಿ ಶಿವಲಿಂಗ, ಥಾಲೆ ಸಾಗರ್‌, ಮೆರು ಹಾಗೂ ಭಾಗಿರಥಿ 3 ಪ್ರಮುಖವಾದ ತಾಣಗಳು. ಇವೆಲ್ಲವೂ ಸಾಹಸದಿಂದ ತೆರಳಬೇಕಾದ ಮಾರ್ಗಗಳು. ಈ ಹಿಮಾಚ್ಛಾದಿತ ತಾಣವು ಒಂದು ವೃತ್ತವನ್ನು ಹೊಂದಿದ್ದು ಅದನ್ನು ಚಕುಂಬಾ ತಪ್ಪಲು ಎಂದು ಕರೆಯಲಾಗುತ್ತದೆ. ಇದು ಮುಂದೆ ಗೋಮುಖವನ್ನು ತಲುಪಿಸುತ್ತದೆ. ಈ ಭಾಗದಲ್ಲಿರುವ ಪ್ರದೇಶ ಗೋವಿನ ಮುಖದಂತಿರುವುದರಿಂದ ಇದನ್ನು ಗೋಮುಖ ಎನ್ನಲಾಗುತ್ತದೆ. ಹಿಂದು ಧಾರ್ಮಿಕ ಭಾವನೆ ಪ್ರಕಾರ, ಇಲ್ಲಿನ ಹಿಮ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.

1780 ರಲ್ಲಿ ಈ ಗ್ಲೇಸಿಯರ್ ನ ಅಳತೆ ಮಾಡಲಾಗಿದ್ದು, ಅಂದಿನಿಂದಲೂ ಪ್ರತಿ ವರ್ಷ ಇದು ಸರಾಸರಿ 19 ಮೀ.ನಷ್ಟು ಕರಗುತ್ತಿದೆ ಎಂದು ಹೇಳಲಾಗಿದೆ. ಇಲ್ಲಿನ ಅತ್ಯಂತ ಪ್ರಮುಖ ಮೂರು ಪ್ರಮುಖ ಉಪನದಿಗಳು ಜನಪ್ರಿಯ. ಅವುಗಳೆಂದರೆ ರಕ್ತವನ, ಚತುರಂಗಿ ಹಾಗೂ ಕೀರ್ತಿ. ಇದಲ್ಲದೇ ಇನ್ನೂ 18 ಚಿಕ್ಕ ಉಪನದಿಗಳು ಇಲ್ಲಿವೆ. ಇಲ್ಲಿನ ಪರ್ವತಗಳ ಎತ್ತರ ಸಮುದ್ರ ಮಟ್ಟದಿಂದ 4120 ಮೀಟರ್‌ನಿಂದ 7000 ಮೀಟರ್‌ವರೆಗೂ ಇವೆ. ಇಲ್ಲಿನ ಎಲ್ಲಾ ವಸ್ತುಗಳೂ ಹಿಮದಿಂದ ಆವೃತ್ತವಾಗಿವೆ. ಬ್ರಿಜ್‌ಗಳು, ಪಾನ್‌ಗಳು, ಹಿಮ ಪರ್ವತಗಳು, ತಪ್ಪಲು, ಮೇದು ಕಲ್ಲಿನ ಪರ್ವತ, ಜಲಪಾತ, ಹಿಮ, ಹಿಮದಿಂದ ಘನಿಭವಿಸಿದ ಕೆರೆ ಎಲ್ಲವೂ ನೋಡಲು ಮನಮೋಹಕವಾಗಿ ಕಾಣುತ್ತವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed