ಈ ದೇವಾಲಯವು ಜೈನ ಸಮುದಾಯದ ಪ್ರಮುಖ ಶ್ರದ್ಧಾ ಕೇಂದ್ರ. ಸಮುದ್ರ ವಿಜಯರ ಪುತ್ರರಾದ, ಜೈನ ಧರ್ಮದ ೨೨ನೇ ತೀರ್ಥಂಕರರಾದ ನೇಮಿನಾಥರಿಗೆ ಈ ದೇವಾಲಯದಲ್ಲಿ ಪೂಜೆ ಸಲ್ಲುತ್ತದೆ. ಸುಮಾರು 400 ವರ್ಷಗಳ ಧ್ಯಾನದ ಬಳಿಕ ನೇಮಿನಾಥರು ಇಹಲೋಕ ತ್ಯಜಿಸಿದ ಪುಣ್ಯಭೂಮಿ ಕೂಡಾ ಇದಾಗಿದೆ. ಇಲ್ಲಿರುವ ನೇಮಿನಾಥರ ಪ್ರತಿಮೆಯು ಪ್ರಪಂಚದಲ್ಲೆ ಅತ್ಯಂತ ಹಳೆಯ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.