Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರ್ನಾರ್ » ಹವಾಮಾನ

ಗಿರ್ನಾರ್ ಹವಾಮಾನ

ಬೇಸಿಗೆಯಲ್ಲಿ ಗಿರ್ನಾರ್ ತಪ್ಪಲಿನಲ್ಲಿ ತೇವಾಂಶವಿರುವ ವಾತಾವರಣ ಕಂಡು ಬಂದರೆ ಅಪರಾಹ್ನದ ವೇಳೆಗೆ ತಾಪಮಾನ ಬಹಳಷ್ಟು ಏರಿಕೆಯಾಗುತ್ತದೆ. ಹೀಗಾಗಿ ಈ ವೇಳೆ ಭೇಟಿ ಕೊಟ್ಟರೆ ಯಾತ್ರಿಕರು ಬೆಳ್ಳಂಬೆಳಗ್ಗೆ ತಮ್ಮ ಯಾತ್ರೆಯನ್ನು ಆರಂಭಿಸಬೇಕಾಗುತ್ತದೆ. ಇನ್ನು ಇಲ್ಲಿರುವ ದೇವಾಲಯಗಳನ್ನು ಸಂದರ್ಶಿಸಬೇಕಾದ್ರೆ ಸಾವಿರಾರು ಮೆಟ್ಟಿಲುಗಳನ್ನು ಏರಬೇಕಾಗಿರುವುದರಿಂದ ಮಳೆಗಾಲದಲ್ಲಿ ಇಲ್ಲಿಬೆ ಭೇಟಿ ಕೊಡುವುದು ಅಷ್ಟೊಂದು ಸೂಕ್ತವಲ್ಲ. ಹೀಗಾಗಿ ಇಲ್ಲಿಗೆ ಭೇಟಿ ಕೊಡಲು ಚಳಿಗಾಲವೇ ಸೂಕ್ತ. ಡಿಸೆಂಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಸಾಕಷ್ಟು ಪ್ರವಾಸದ ಮಜಾವನ್ನು ಅನುಭವಿಸಬಹುದು.

ಬೇಸಿಗೆಗಾಲ

ಬೇಸಿಗೆ ಕಾಲವಾದ ಮಾರ್ಚ್‌ನಿಂದ ಜೂನ್‌ವರೆಗೆ ಬಹಳಷ್ಟು ಉಷ್ಣಾಂಶವನ್ನು ಹೊಂದಿರುತ್ತದೆ. ತಾಪಮಾನವು ತುಂಬಾ ಅತಿಯಾಗಿದ್ದು, ಈ ವೇಳೆ ಎಲ್ಲೆಡೆ ಶುಷ್ಕ ವಾತಾವರಣ ಕಂಡುಬರುತ್ತದೆ. ಈ ಕಾಲದಲ್ಲಿ ಸಾಮಾನ್ಯವಾಗಿ ತಾಪಮಾನವು 23  ಡಿ.ಸೆ. ನಿಂದ 44 ಡಿ.ಸೆ.ವರೆಗೆ ಇರುತ್ತದೆ.

ಮಳೆಗಾಲ

ಇನ್ನು ಮಳೆಗಾಲದ ವಿಷಯಕ್ಕೆ ಬಂದರೆ ಮಧ್ಯಮವಾಗಿ ಮಳೆ ಸುರಿಯುತ್ತದೆ. ಸಾಮಾನ್ಯವಾಗಿ ಮಳೆಗಾಲವು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇರುತ್ತದೆ.

ಚಳಿಗಾಲ

ಚಳಿಗಾಲವು ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಫೆಬ್ರವರಿಯವರೆಗೆ ಇರುತ್ತದೆ. ಈ ಸಮಯದಲ್ಲಿ ತಾಪಮಾನವು 36 ಡಿ.ಸೆ.ನಿಂದ 10 ಡಿ.ಸೆ.ವರೆಗೆ ಇಳಿಯುತ್ತದೆ.