Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರ್ನಾರ್ » ಆಕರ್ಷಣೆಗಳು

ಗಿರ್ನಾರ್ ಆಕರ್ಷಣೆಗಳು

  • 01ಭವನಾಥ ಮಹಾದೇವ ದೇವಾಲಯ

    ಭವನಾಥ ಮಹಾದೇವ ದೇವಾಲಯ

    ಗಿರ್ನಾರ್ ಶಿಖರದ ಮೇಲಿರುವ ಮತ್ತೊಂದು ದೇವಾಲಯವೆಂದರೆ ಭವನಾಥ ಮಹಾದೇವ ದೇವಾಲಯ. ಈ ದೇವಾಲಯದಲ್ಲಿ ಆಚರಣೆಯಾಗುವ ಪ್ರಮುಖ ಉತ್ಸವವೆಂದರೆ ಶಿವರಾತ್ರಿ. ಶಿವರಾತ್ರಿಯ ಸಮಯದಲ್ಲಿ ಸ್ವತಃ ಪರಶಿವನೇ ಕೈಲಾಸದಿಂದ ಇಲ್ಲಿಗೆ ಬರುತ್ತಾನೆ ಎನ್ನುವ ನಂಬಿಕೆಯಿದ್ದು, ಶಿವರಾತ್ರಿಯನ್ನು ಇಲ್ಲಿ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ವೇಳೆ...

    + ಹೆಚ್ಚಿಗೆ ಓದಿ
  • 02ದತ್ತಾತ್ರೇಯ ದೇವಾಲಯ

    ದತ್ತಾತ್ರೇಯ ದೇವಾಲಯ

    ಗಿರ್ನಾರ್ ಬೆಟ್ಟಗಳ ತುತ್ತತುದಿಯಲ್ಲಿರುವ ದೇವಾಲಯವೆಂದರೆ ಶ್ರೀ ದತ್ತಾತ್ರೇಯ ದೇವಾಲಯ. ಭಗವಾನ್ ದತ್ತಾತ್ರೇಯರ ಪಾದದ ಗುರುತುಗಳು ಇಲ್ಲಿ ಕಾಣಿಸುತ್ತವೆ ಎನ್ನುವ ನಂಬಿಕೆಯಿದೆ. ಬ್ರಹ್ಮ, ವಿಷ್ಣು, ಮಹೇಶ್ವರರ ಅಂಶವೆಂದು ಕರೆಯಿಸಿಕೊಳ್ಳುವ ಭಗವಾನ್ ದತ್ತಾತ್ರೇಯ ಇಲ್ಲಿನ ಆರಾಧ್ಯ ಮೂರ್ತಿ.

    + ಹೆಚ್ಚಿಗೆ ಓದಿ
  • 03ಅಂಬಾ ಮಾತಾ ದೇವಾಲಯ

    ಅಂಬಾ ಮಾತಾ ದೇವಾಲಯ

    ಗಿರ್ನಾರ್ ಬೆಟ್ಟಗಳಲ್ಲಿರುವ ದೇವಾಲಯಗಳ ಪೈಕಿ ಅಂಬಾ ಮಾತಾ ದೇವಾಲಯ ಕೂಡಾ ಪ್ರಮುಖವಾದುದು. ಸುಮಾರು ೧೨ನೇ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯವು ಬಹಳ ಪುರಾತನವಾದುದು. ಅಂಬಾ ಮಾತೆಯು ಇಲ್ಲಿನ ಅಧಿದೇವತೆಯಾಗಿದ್ದು, ದೇವಾಲಯದ ನಿರ್ಮಾಣ ವೇಳೆಯಲ್ಲಿ ದೇವತೆಯ ಪಾದದ ಅಚ್ಚಿನೊಂದಿಗೆ ರಥದ ಗುರುತುಗಳು ಕಾಣಸಿಕ್ಕಿದ್ದವಂತೆ. ಹಿಂದೂ...

    + ಹೆಚ್ಚಿಗೆ ಓದಿ
  • 04ಕಾಳಿಕಾ ದೇವಾಲಯ

    ಕಾಳಿಕಾ ದೇವಾಲಯ

    ಕಾಳಿಕಾ ದೇವಾಲಯವು ಗಿರ್ನಾರ್ ತಪ್ಪಲಿನಲ್ಲಿರುವ ’ಪಾವಘರ್’ ಎನ್ನುವ ಶಿಖರದ ತುದಿಯಲ್ಲಿದೆ. ಇದು ಹಿಂದೂ ಮುಸ್ಲಿಂ ಯಾತ್ರಾರ್ಥಿಗಳ ಪ್ರಮುಖ ಯಾತ್ರಾಸ್ಥಳ. ಕಾಳಿ ಮಾತೆಯು ಇಲ್ಲಿನ ದೇವತೆಯಾಗಿದ್ದು, ಇಲ್ಲಿರುವ ವಿಗ್ರಹವು ಬಹಳ ವಿಶೇಷವಾಗಿದೆ. ವಿಗ್ರ್ಹಹವು ನಾಲ್ಕು ಕೈಗಳನ್ನು ಹೊಂದಿದ್ದು, ಒಂದು ಕೈಯಲ್ಲಿ ಖಡ್ಗ,...

    + ಹೆಚ್ಚಿಗೆ ಓದಿ
  • 05ಜಟಾಶಂಕರ ಮಹಾದೇವ ದೇವಾಲಯ

    ಜಟಾಶಂಕರ ಮಹಾದೇವ ದೇವಾಲಯ

    ಗಿರ್ನಾರ್ ಶಿಖರಗಳ ತಪ್ಪಲಿನಲ್ಲಿರುವ ಪ್ರಮುಖ ತೀರ್ಥಯಾತ್ರಾ ತಾಣಗಳ ಪೈಕಿ ಜಟಾಶಂಕರ ಮಹಾದೇವ ದೇವಾಲಯ ಕೂಡಾ ಒಂದು. ಪರಶಿವನು ಇಲ್ಲಿನ ಆರಾಧ್ಯ ಮೂರ್ತಿಯಾಗಿದ್ದು, ತನ್ನಲ್ಲಿಗೆ ಬರುವ ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆಯಿದೆ.

    + ಹೆಚ್ಚಿಗೆ ಓದಿ
  • 06ಗೌಮುಖಿ ಗಂಗಾ ದೇವಾಲಯ

    ಗೌಮುಖಿ ಗಂಗಾ ದೇವಾಲಯ

    ಗಿರ್ನಾರ್‌ನಲ್ಲಿರುವ ಇನ್ನೊಂದು ಪ್ರಮುಖ ದೇವಾಲಯವೆಂದರೆ ಗೌಮುಖಿ ಗಂಗಾ ದೇವಾಲಯ. ಗಂಗಾ ಮಾತೆಯು ಇಲ್ಲಿನ ಆದಾಧ್ಯ ದೇವತೆ. ಸುತ್ತಮುತ್ತಲಿನ ಪ್ರದೇಶಗಳಿಂದ ನೂರಾರು ಪ್ರವಸಿಗರು, ತೀರ್ಥಯಾತ್ರಿಗರು ಈ ಪ್ರದೇಶಕ್ಕೆ ಭೇಟಿ ಕೊಡುತ್ತಾರೆ.

    + ಹೆಚ್ಚಿಗೆ ಓದಿ
  • 07ಹನುಮಾನ್ ಧಾರಾ

    ಹನುಮಾನ್ ಧಾರಾ

    ಗಿರ್ನಾರ್ ಶಿಖರದ ಪ್ರಮುಖ ಆಕರ್ಷಣೆಗಳಲ್ಲಿ ಹನುಮಾನ್ ಧಾರಾ ಕೂಡಾ ಒಂದು. ಗೌಮುಖಿ ಗಂಗಾ ದೇವಾಲಯದ ಪಕ್ಕದಲ್ಲೇ ಇರುವ ಈ ತಾಣವು ಹಲವು ಆಕರ್ಷಣೆಗಳ ಕೇಂದ್ರ ಬಿಂದು.

    + ಹೆಚ್ಚಿಗೆ ಓದಿ
  • 08ತೀರ್ಥಂಕರ ನೇಮಿನಾಥ ದೇವಾಲಯ

    ತೀರ್ಥಂಕರ ನೇಮಿನಾಥ ದೇವಾಲಯ

    ಈ ದೇವಾಲಯವು ಜೈನ ಸಮುದಾಯದ ಪ್ರಮುಖ ಶ್ರದ್ಧಾ ಕೇಂದ್ರ. ಸಮುದ್ರ ವಿಜಯರ ಪುತ್ರರಾದ, ಜೈನ ಧರ್ಮದ ೨೨ನೇ ತೀರ್ಥಂಕರರಾದ ನೇಮಿನಾಥರಿಗೆ ಈ ದೇವಾಲಯದಲ್ಲಿ ಪೂಜೆ ಸಲ್ಲುತ್ತದೆ. ಸುಮಾರು 400 ವರ್ಷಗಳ ಧ್ಯಾನದ ಬಳಿಕ ನೇಮಿನಾಥರು ಇಹಲೋಕ ತ್ಯಜಿಸಿದ ಪುಣ್ಯಭೂಮಿ ಕೂಡಾ ಇದಾಗಿದೆ. ಇಲ್ಲಿರುವ ನೇಮಿನಾಥರ ಪ್ರತಿಮೆಯು ಪ್ರಪಂಚದಲ್ಲೆ ಅತ್ಯಂತ...

    + ಹೆಚ್ಚಿಗೆ ಓದಿ
  • 09ಮಲ್ಲಿನಾಥ ದೇವಾಲಯ

    ಮಲ್ಲಿನಾಥ ದೇವಾಲಯ

    ಮಲ್ಲಿನಾಥ ದೇವಾಲಯವು ಗಿರ್ನಾರ್ ಬೆಟ್ಟಗಳ ತಪ್ಪಲಿನಲ್ಲಿ, ತೀರ್ಥಂಕರ ನೇಮಿನಾಥ ದೇವಾಲಯದ ಪಕ್ಕದಲ್ಲೆ ಇದೆ. ಜೈನ ಧರ್ಮದ ೧೯ನೇ ತೀರ್ಥಂಕರರಾಗಿದ್ದ ಮಲ್ಲಿನಾಥರ ನೀಲವರ್ಣದ ಪ್ರತಿಮೆಯನ್ನು ದೇವಾಲಯ ಹೊಂದಿದೆ. ವಸ್ತುಪಾಲ್ ಮತ್ತು ತೇಜುಪಾಲ್ ಎನ್ನುವ ಇಬ್ಬರು ಸೋದರರು ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗುತ್ತಿದ್ದು, ಹೆಚ್ಚು...

    + ಹೆಚ್ಚಿಗೆ ಓದಿ
  • 10ವೃಷಭದೇವ ದೇವಾಲಯ

    ವೃಷಭದೇವ ದೇವಾಲಯ

    ಗಿರ್ನಾರ್ ಶಿಖರಗಳ ತಪ್ಪಲಿನಲ್ಲಿರುವ ಇನ್ನೊಂದು ಜೈನ ದೇವಾಲಯವೆಂದರೆ ವೃಷಭದೇವ. ೨೪ನೇ ತೀರ್ಥಂಕರರಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಬಂಗಾರದ ಬಣ್ಣದಿಂದ ಹೊಳೆಯುತ್ತಿರುವ ಈ ದೇವಾಲಯವು ಭಕ್ತರ ಹಲವು ಆಶೋತ್ತರಗಳನ್ನು ಈಡೇರಿಸಿದ ಕೀರ್ತಿಗೂ ಪಾತ್ರವಾಗಿದೆ. ಈ ದೇಗುಲದ ಪಕ್ಕದಲ್ಲಿ ಹಲವು ಹಿಂದೂ ದೇಗುಲಗಳು ಕೂಡಾ ಇವೆ,...

    + ಹೆಚ್ಚಿಗೆ ಓದಿ
  • 11ಪಾರ್ಶ್ವನಾಥ ದೇವಾಲಯ

    ಪಾರ್ಶ್ವನಾಥ ದೇವಾಲಯ

    ವೃಷಭನಾಥ ದೇವಾಲಯದ ಪಕ್ಕದಲ್ಲೆ ಇದೆ ಈ ಪಾರ್ಶ್ವನಾಥ ದೇವಾಲಯ. ಈ ದೇವಾಲಯವು ಸುಮಾರು ೧೫ನೇ ಶತಮಾನದಲ್ಲಿ ಕಟ್ಟಲ್ಪಟ್ಟಿದೆ ಎನ್ನುವ ಬಗ್ಗೆ ಇತಿಹಾಸದಲ್ಲಿ ದಾಖಲೆಗಳು ಲಭ್ಯವಾಗುತ್ತವೆ. ಮೇರವಾಸಿ ಎನ್ನುವುದು ಈ ದೇಗುಲಕ್ಕಿರುವ ಇನ್ನೊಂದು ಹೆಸರು.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat