ಗಿರ್ನಾರ್ ಶಿಖರಗಳ ತಪ್ಪಲಿನಲ್ಲಿರುವ ಇನ್ನೊಂದು ಜೈನ ದೇವಾಲಯವೆಂದರೆ ವೃಷಭದೇವ. ೨೪ನೇ ತೀರ್ಥಂಕರರಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಬಂಗಾರದ ಬಣ್ಣದಿಂದ ಹೊಳೆಯುತ್ತಿರುವ ಈ ದೇವಾಲಯವು ಭಕ್ತರ ಹಲವು ಆಶೋತ್ತರಗಳನ್ನು ಈಡೇರಿಸಿದ ಕೀರ್ತಿಗೂ ಪಾತ್ರವಾಗಿದೆ. ಈ ದೇಗುಲದ ಪಕ್ಕದಲ್ಲಿ ಹಲವು ಹಿಂದೂ ದೇಗುಲಗಳು ಕೂಡಾ ಇವೆ, ಹೀಗಾಗಿ ಭಕ್ತರು ಎರಡೂ ಕಡೆಗಳಿಗೆ ತೆರಳಿ, ಧನ್ಯರಾಗುತ್ತಾರೆ.