ಉಜ್ಜಲೇಶ್ವರವು ಗಂಜಾಂನ ಬೇಹ್ರಮಪುರದಿಂದ 45 ಕೀಲೊ ಮೀಟರ ದೂರದಲ್ಲಿದೆ. ಉಜ್ಜಲೇಶ್ವರ ದೇವಾಲಯವು ಬೆಟ್ಟದ ಮೇಲೆ ಇರುವ ಗುಹೆಯ ಮೇಲೆ ಪ್ರಾಕೃತಿಕವಾಗಿ ನಿರ್ಮಾಣಗೊಂಡಿದೆ. ಈ ದೇವಾಲಯವನ್ನು ತಲುಪಲು ಬೆಟ್ಟದ ಕಲ್ಲುಗಳನ್ನು ಕಡೆದು ಅನೇಕ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಹಿಂದುಗಡೆಯಲ್ಲಿರುವ ಒಂದು ದೊಡ್ಡ ಕಲ್ಲು ಇಲ್ಲಿನ ದೇವತೆಗೆ ನಾಟಕೀಯವಾಗಿ ನೆರಳಿನಂತೆ ಕಾರ್ಯನಿರ್ವಹಿಸುತ್ತದೆ. ಈ ಮೆಟ್ಟಿಲುಗಳನ್ನು ಸಹ ಸುಂದರವಾಗಿ ನಿರ್ಮಿಸಲಾಗಿದ್ದು ಭಕ್ತರಿಗೆ ದೇವಾಲಯದ ಸುತ್ತಮುತ್ತಲಿರುವ ನೋಟ ಮತ್ತು ಪರಿಸರವನ್ನು ವಿಕ್ಷಿಸಲು ನೆರವಾಗುತ್ತದೆ.
ನೆಮ್ಮದಿಯಿಂದ ಕೂಡಿದ ಈ ಪ್ರದೇಶವು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಚೈತನ್ಯ ಮತ್ತು ಸಾಂತ್ವನದ ಭಾವನೆಯನ್ನು ನೀಡುತ್ತದೆ. ಈ ಸ್ಥಳಕ್ಕೆ ತಲುಪುವ ಮುನ್ನ, ಪ್ರವಾಸಿಗರು ಘೋಡಹಡ ಆಣೆಕಟ್ಟನ್ನು ಹಾದು ಹೋಗಬೇಕು. ಘೋಡಹಡ ಆಣೆಕಟ್ಟು ಇದು ಕಾಲಾಂತರದಲ್ಲಿ ಮುಳುಗಿಹೋಗಿರುವ ಕೋಟೆ ಮತ್ತು ದೇವಾಲಯವಾಗಿದೆ. ಈ ಕೋಟೆಗೆ ವಿಜಯ ನಗರ ಎಂದು ಹೆಸರಿತ್ತು. ಇಲ್ಲಿಗೆ ತಮ್ಮ ದಾಹವನ್ನು ತೀರಿಸಿಕೊಳ್ಳಲೆಂದು ಬರುವ ಆನೆಗಳು , ಹೆಬ್ಬಾವುಗಳು, ಮೊಸಳೆಗಳ ಗುಂಪುಗಳು ಇಲ್ಲಿನ ನೀರವ ಮೌನಕ್ಕೆ ಕಡಿವಾಣವನ್ನು ಹಾಕುತ್ತವೆ. ಈ ಆಣೆಕಟ್ಟಿನ ಮೇಲೆ ನಿಂತು ಇಲ್ಲಿನ ಸಹಜ ಪ್ರಾಕೃತಿಕ ದೃಶ್ಯವನ್ನು ನೋಡಬಹುದು ಮತ್ತು ಸೊಗಸಾದ ವನ್ಯಜೀವಿಗಳನ್ನು ನೋಡಿ ಆನಂದದ ಅನುಭವವನ್ನು ಪಡೆಯಬಹುದು.


Click it and Unblock the Notifications