ಹುಮಾ ಕಾಂತೀಯಗಡ ಗಂಜಾಂ ಛತ್ರಪುರದಿಂದ 13 ಕೀಲೊ ಮೀಟರ ದೂರದಲ್ಲಿ ನೆಲೆಗೊಂಡಿದೆ. ಇದು ತನ್ನ ಕಡಲ ತೀರಗಳಿಗೆ ಪ್ರಸಿದ್ಧಿಯನ್ನು ಹೊಂದಿದ್ದು, ಅಂತರಾಷ್ಟ್ರೀಯ ಕಡಲ ತೀರಗಳ ಭಾವನೆಯನ್ನು ನೀಡುತ್ತದೆ. ಇಲ್ಲಿ ಪ್ರವಾಸಿಗರು ಸೂರ್ಯನ ಸ್ನಾನದ ಆನಂದವನ್ನು ಅನುಭವಿಸಬಹುದು. ಸಾಹಸ ಪ್ರಿಯರು ಈ ಕಡಲ ತೀರದಲ್ಲಿ ಸರ್ಫೀಂಗ ಅನುಭವವನ್ನು ಪಡೆಯಬಹುದು ಅಥವಾ ನೋಡಬಹುದು. ಮರಳು ತೀರವನ್ನು ಮುತ್ತಿಕುವ, ಸೂರ್ಯನೊಂದಿಗೆ ಸ್ಪರ್ಧೆಗೆ ಇಳಿದಂತೆ ಏರಿಳಿತ ಕಾಣುವ ಸಾಗರದ ತರಂಗದ ಅಲೆಗಳ ರುದ್ರ ನರ್ತನದ ವೈಭವವನ್ನು ನೋಡುವುದೇ ಕಣ್ಣಿಗೆ ಆನಂದ.
ಕಾಂತೀಯಗಡ ಒಂದು ಅದ್ಭುತ ದೃಶ್ಯತಾಣವಾಗಿದ್ದು ಕಾಂತೀಯಗಡದಿಂದ 8 ಕೀಲೊ ಮೀಟರ ದೂರದಲ್ಲಿದೆ. ಹುಮಾ ಕಾಂತಿಯಗಡವು ಹಲವಾರು ದೇವತೆಗಳ ದೇವಸ್ಥಾನಗಳಿಂದ ಸುತ್ತವರೆಯಲ್ಪಟ್ಟಿದೆ. ಉದಾ: ಕಪಿಲೇಶ್ವರ ದೇವಸ್ಥಾನ, ಲಾಂಗಲೇಶ್ವರ ದೇವಸ್ಥಾನ ಮುಂತಾದವುಗಳು ಈ ಸ್ಥಳವನ್ನು ಪ್ರಸಿದ್ದ ತೀರ್ಥ ಕೇಂದ್ರವನ್ನಾಗಿ ಮಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಿವೆ.ಹುಮಾ ಕಾಂತೀಯಗಡವು ಚಳಿಗಾಲದ ಅವಧಿಯಲ್ಲಿ ಹಲವಾರು ಭಕ್ತರನ್ನು ಮತ್ತು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಈ ಸಮಯದಲ್ಲಿ ಇಲ್ಲಿನ ಪ್ರಕೃತಿಯ ವಿಸ್ಮಯ ಮತ್ತು ವೈಭವವನ್ನು ನೋಡಲು ಮತ್ತು ಧಾರ್ಮಿಕ ಕೇಂದ್ರಗಳಿಗೆ ಹೋಗಿ ದೇವರಿಗೆ ತಮ್ಮ ವಂದನೆ ಮತ್ತು ಕಾಣಿಕೆಯನ್ನು ಸಲ್ಲಿಸಲು ಪ್ರವಾಸಿಗರು ಮತ್ತು ಭಕ್ತರು ತಂಡೋಪತಂಡವಾಗಿ ಬರುತ್ತಾರೆ.


Click it and Unblock the Notifications