ಬಾಲಕುಮಾರಿ ದೇವಸ್ಥಾನವು ಒರಿಸ್ಸಾ(ಒಡಿಶಾ)ದಲ್ಲಿರುವ ಒಂದು ಪ್ರಸಿದ್ದ ದೇವಾಲಯವಾಗಿದ್ದು, ಶ್ರೇಯಸ್ಕರ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಈ ರಾಜ್ಯದಲ್ಲಿ ಭೇಟಿ ಕೊಡಲೇಬೇಕಾದ ಸ್ಥಳಗಳಲ್ಲಿ ಇದು ಕೂಡ ಒಂದು. ಭಕ್ತರು ಈ ದೇವತೆಯ ಮಿಣುಕು ದರ್ಶನವನ್ನು ಪಡೆಯಲು 1240 ಮೆಟ್ಟಿಲುಗಳನ್ನು ಏರುವ ಸಾಹಸವನ್ನು ಮಾಡಬೇಕಾಗಿದೆ. ಈ ದೇವಾಲಯದ ಕುರಿತಾಗಿ ಅನೇಕ ಪುರಾಣ ಕಲ್ಪನೆಗಳಿವೆ. ಈ ದೇವತೆಯು ಅವಿವಾಹಿತಳಾದ ಕಾರಣ ಅವಳಲ್ಲಿ ಅಪಾರವಾದ ಶಕ್ತಿಯಿದ್ದು, ಇಲ್ಲಿರುವ ಸ್ಥಳಿಯ ದೇವತೆಗಳ ನಡುವೆ ಆಕೆ ಪರಾಶಕ್ತಿಯಾಗಿದ್ದಾಳೆ ಎಂಬ ನಂಬಿಕೆ ಇಲ್ಲಿಯ ಸ್ಥಳೀಯರಲ್ಲಿದೆ.
ಈ ದೇವತೆ ಎಷ್ಟು ಶಕ್ತಿಶಾಲಿಯಾಗಿದ್ದಾಳೆಂದರೆ ಅವಳ ಕೃಪೆ ಮತ್ತು ಆಶಿರ್ವಾದವನ್ನು ಪಡೆಯಲು ಬೇರೆ ರಾಜ್ಯಗಳ ಜನರು ಈ ದೇವಾಲಯಕ್ಕೆ ಆಗಾಗ ಭೇಟಿ ನೀಡುತ್ತಾರೆ. ನವರಾತ್ರಿಯ ಸಮಯದಲ್ಲಿ ಈ ದೇವಸ್ಥಾನದ ಆವರಣದಲ್ಲಿ ಹಬ್ಬ ಮತ್ತು ಉತ್ಸವವನ್ನು ಆಯೋಜಿಸಲಾಗುತ್ತದೆ. ಆಗ ಆ ಸಮಯದಲ್ಲಿ ಅಸಂಖ್ಯಾತ ಸಾವಿರಾರು ಭಕ್ತರು ಈ ಹಬ್ಬದಲ್ಲಿ ಭಾಗವಹಿಸಿ ದೇವತೆಗೆ ತಮ್ಮ ಹರಕೆ ಮತ್ತು ಕಾಣಿಕೆಯನ್ನು ಸಲ್ಲಿಸುತ್ತಾರೆ. ಮಂಗಳವಾರ ಬಾಲ ಕುಮಾರಿಯ ವಿಶೇಷ ದಿನ. ಈ ದಿನ ಭಕ್ತರು ತಮ್ಮ ವಿಶೇಷ ಪೂಜೆ, ಕಾಣಿಕೆ ಮತ್ತು ಹರಕೆಗಳನ್ನು ಸಲ್ಲಿಸುತ್ತಾರೆ.


Click it and Unblock the Notifications