ಗದಗ್‌ನ ಪ್ರಮುಖ ಪಟ್ಟಣ ಸುದಿ. ಈ ಪಟ್ಟಣ ಹೆಸರಾಗಿದ್ದು ಇಲ್ಲಿನ ಕಲ್ಲಿನ ಕೆತ್ತನೆಯಿಂದಾಗಿ. ಇಲ್ಲಿನ ಕೆತ್ತನೆಗಳು ಹಿಂದಿನ ಕಾಲದಿಂದಲೂ ಪ್ರಸಿದ್ಧವಾದದ್ದಲ್ಲ. ಬದಲಿಗೆ ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್‌ಐ) ಇಲಾಖೆಯ ಅಧೀನದಲ್ಲಿ ಬಂದ ಮೇಲೆ ಈ ಪಟ್ಟಣದ ಕಲ್ಲಿನ ಕೆತ್ತನೆಗಳು ಬೆಳಕಿಗೆ ಬಂದವು. ಕಲ್ಯಾಣಿ ಚಾಲುಕ್ಯರು ಈ ಪ್ರದೇಶವನ್ನು 1000 ನೇ ಇಸ್ವಿಯಲ್ಲಿ ಆಳಿದ್ದರು. ಇತ್ತೀಚಿನ ಕೆಲವು ಶತಮನಾಗಳ ಹಿಂದಿನವರೆಗೂ ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪಕ್ಕೆ ಇದೇ ಪ್ರಮುಖ ಕೇಂದ್ರವಾಗಿತ್ತು.
ಇಲ್ಲಿರುವ ಕೆಲವು ಪ್ರಮುಖ ಸ್ಮಾರಕಗಳೆಂದರೆ ಮಲ್ಲಿಕಾರ್ಜುನ ದೇವಸ್ಥಾನ, ಅವಳಿ ಗೋಪುರ ದೇವಸ್ಥಾನ ಮತ್ತು ನಾಗ ಕುಂಡ. ಇನ್ನೂ ಕೆಲವು ನೋಡಲೇಬೇಕಾದ ಸ್ಮಾರಕಗಳು ಹೀಗಿವೆ; ಗಣಪತಿ ಮೂರ್ತಿ, ಕಲ್ಲಿನಿಂದ ಮಾಡಿದ ಗುಡಿಯಲ್ಲಿರುವ ಈಶ್ವರ ಲಿಂಗ, ಹುಡೆ ಎಂಬ ಗೋಪುರ ಮತ್ತು ದೊಡ್ಡ ಶಿವಲಿಂಗ. ಇಂತಹ ಗಮನಾರ್ಹ ಸ್ಮಾರಕಗಳನ್ನು ಹೊಂದಿರುವುದರಿಂದ ಗದಗಿಗೆ ಬರುವ ಪ್ರವಾಸಿಗರ ಪಟ್ಟಿಯಲ್ಲಿ ಸುದಿಗೆ ’ನೋಡಲೇಬೇಕಾದ ಸ್ಥಳ’ ಎಂಬ ಬಿರುದು ಸಿಕ್ಕಿದೆ.


Click it and Unblock the Notifications