ಈ ಮಕ್ಬಾರಾವನ್ನು ನವಾಬ್ ಸಜಾ-ಉಲ್-ದೌಲಾ ತನ್ನ ಪ್ರೀತಿಯ ಮಡದಿ ಬಹು ಬೇಗಂ ಸ್ಮರಣಾರ್ಥವಾಗಿ ನಿರ್ಮಿಸಿದ ಸಮಾಧಿ. ಮಕ್ಬಾರಾ ಮೊಘಲರ ಅತ್ಯುದ್ಭುತ ಕಲಾ ಕೌಶಲಕ್ಕೆ ಮೆರುಗು ನೀಡುವಂತಹ ಸ್ಮಾರಕವಾಗಿದೆ. ಇತಿಹಾಸದ ಪ್ರಕಾರ1816 ರಲ್ಲಿ ಈ ಸಮಾಧಿ ನಿರ್ಮಾಣವಾಗಿದ್ದು, ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಸೌಂದರ್ಯವನ್ನು ಮೀರಿಸಲು ಸಜ್ಜಾಗಿತ್ತು. ಶ್ವೇತ ವರ್ಣದ ಅಮೃತ ಶಿಲೆಗಳು ಹುಣ್ಣಿಮೆಯ ಸಮಯದಲ್ಲಿ ಚಂದ್ರನ ಬೆಳದಿಂಗಳಲ್ಲಿ ಅತ್ಯದ್ಭುತವಾಗಿ ಕಾಣುತ್ತದೆ. 42 ಮೀಟರ್ ಎತ್ತರ ಹೊಂದಿರುವ ಈ ಸ್ಮಾರಕದ ಮೂಲಕ ಮೇಲೇರಿದರೆ ಫೈಜಾಬಾದ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು ವರ್ಣರಂಜಿತವಾಗಿ ಕಾಣುತ್ತದೆ. ಭಾರತದ ಪುರಾತನ ವಸ್ತುಸಂಗ್ರಹಾಲಯ ಸಂಸ್ಥೆ ಇದರ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.


Click it and Unblock the Notifications