ಶಾರದಾಪೀಠ ಮಠವು ಹಿಂದೂಧರ್ಮ ಪುನರುತ್ಥಾನಕಾರರಾದ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ 4 ಮಠಗಳಲ್ಲಿ ಒಂದು. ಇದನ್ನು ದ್ವಾರಕ ಪೀಠ/ಕಾಳಿಕಾ ಪೀಠ ಎಂದೂ ಕರೆಯುತ್ತಾರೆ. ಇದು ದ್ವಾರಕ ದೇವಾಲಯದ ಆವರಣದೊಳಗಿದೆ. ಇಲ್ಲಿ ಶಂಕರಾಚಾರ್ಯರ ಬದುಕಿನ ಇತಿಹಾಸವನ್ನು ಹೇಳುವ ಚಿತ್ರಗಳನ್ನು ಗೋಡೆಯ ಮೇಲೆ ಚಿತ್ರಿಸಲಾಗಿದೆ. ಒಳಗಿನ ಗುಮ್ಮಟದ ಮೇಲೆ ಶಿವನ ವಿವಿಧ ಭಂಗಿಗಳನ್ನು ಚಿತ್ರಿಸಲಾಗಿದೆ. ಇಲ್ಲಿ ಶಾರದಾ ದೇವಿ ಮತ್ತು ಚಂದ್ರಮೌಳೇಶ್ವರ ದೇವಾಲಯಗಳಿವೆ. ಇದಕ್ಕೆ ಹೊಂದಿಕೊಂಡಂತೆ ಶಿಕ್ಷಣ ಸಂಸ್ಥೆ, ಕಲಾ ಕಾಲೇಜು ಮತ್ತು ಸಂಸ್ಕೃತ ಅಕಾಡೆಮಿಯಿದೆ.


Click it and Unblock the Notifications