ದ್ವಾರಕ ನಗರವು ಹಲವು ಅದ್ಭುತ ಧಾರ್ಮಿಕ ಸ್ಥಳಗಳು ಮತ್ತು ನಿಗೂಢ ಐತಿಹ್ಯಗಳನ್ನು ಒಳಗೊಂಡಿದೆ. ಇವುಗಳನ್ನು ನೋಡಲು ಮತ್ತು ನಗರದ ಪಕ್ಷಿನೋಟವನ್ನು ನೋಡಲು ಇಲ್ಲಿನ ಗೋಮಾತಿ ನದಿಯಲ್ಲಿ ಪ್ರವಾಸಿಗರು ದೋಣಿಯಲ್ಲಿ ಕೂತು ಒಂದು ಸುತ್ತು ಬರಬಹುದು. ಇಲ್ಲಿನ ದಂಡೆಯಲ್ಲಿ ಶಿವ, ರಾಮ, ಕೃಷ್ಣ ಮತ್ತು ಸುಧಾಮನ ದೇವಾಲಯಗಳಿದೆ. ಸುಧಾಮ ಕೃಷ್ಣನ ಗೆಳೆಯ. ಈ ದೇವಾಲಯಗಳು ಎಂದಿನಿಂದಲೂ ಯಾತ್ರಾರ್ಥಿಗಳ ನಡುವೆ ಪ್ರಸಿದ್ಧವಾಗಿದೆ.


Click it and Unblock the Notifications