ವರದ ವಿನಾಯಕ ದೇವಾಲಯವು ಗಣಪತಿಯ ದೇವಾಲಯವಾಗಿದ್ದು, ಅಷ್ಟ ವಿನಾಯಕ ದೇವಾಲಯಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಇದು ಮಹದ್ ಗ್ರಾಮದಲ್ಲಿ ನೆಲೆಗೊಂಡಿದೆ. ವರದ ವಿನಾಯಕನ ವಿಗ್ರಹವು ಈ ಊರಿನ ಕೆರೆಯಲ್ಲಿ ಕ್ರಿ.ಶ 1690 ರಲ್ಲಿ ಅತ್ಯಂತ ಕುತೂಹಲಕರ ರೀತಿಯಲ್ಲಿ ಶ್ರೀ ದೊಂಡು ಪೌಡ್ಕರ್ ರವರಿಗೆ ದೊರೆಯಿತು. ಪ್ರಸ್ತುತ ಈ ದೇವಾಲಯವು, ಉಸ್ತುವಾರಿಯನ್ನು ಹೊತ್ತಿರುವ ಟ್ರಸ್ಟ್ ಸದಸ್ಯರ ಮುಂದಾಳತ್ವದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ. ಇಲ್ಲಿರುವ ವಿಗ್ರಹವು ಸುಮಾರು 8 ಅಡಿ ಎತ್ತರವಿದ್ದು, 25 ಅಡಿ ಎತ್ತರವಿರುವ ಚಿನ್ನದ ಗೋಪುರ (ಗುಮ್ಮಟ) ವನ್ನು ಹೊಂದಿದೆ.
ಇಲ್ಲಿಗೆ ಭೇಟಿ ಕೊಡುವವರು ಇಲ್ಲಿ ದೊರೆತ ಮೂಲ ವಿಗ್ರಹವನ್ನು ದೇವಾಲಯದ ಹೊರಭಾಗದಲ್ಲಿ ಕಾಣಬಹುದು. ಆದರೆ ಇದು ಶಿಥಿಲಾವಸ್ಥೆಯಲ್ಲಿದ್ದು, ಭಿನ್ನಗೊಂಡಿದೆ. ಹಾಗಾಗಿ ಅದನ್ನು ನೀರಿನಲ್ಲಿ ಮುಳುಗಿಸಿ ಇಡಲಾಗಿದ್ದು, ಹೊಸ ವಿಗ್ರಹವನ್ನು ಇಲ್ಲಿ ಸ್ಥಾಪಿಸಲು ತರಲಾಗಿದೆ. ಅಲ್ಲದೆ ರಿದ್ಧಿ ಮತ್ತು ಸಿದ್ಧಿಯರ ಕಲ್ಲಿನ ವಿಗ್ರಹವನ್ನು ಸಹ ನಾವಿಲ್ಲಿ ಸ್ಪಷ್ಟವಾಗಿ ಕಾಣಬಹುದು.
ಗಣಪತಿಯ ಅವತಾರವೆ ವರದ ವಿನಾಯಕ. ಇದಕ್ಕೆ ಸಂಬಂಧಿಸಿದಂತೆ ಹಲವಾರು ದಂತಕಥೆಗಳು ಮತ್ತು ಪುರಾಣ ಕಥೆಗಳು ಚಾಲ್ತಿಯಲ್ಲಿವೆ. ಇದು ಇಲ್ಲಿಗೆ ಆಗಮಿಸುವ ಭಕ್ತಾಧಿಗಳ ಕುತೂಹಲಕ್ಕೆ ಕಾರಣವಾಗಿವೆ.


Click it and Unblock the Notifications