Search
  • Follow NativePlanet
Share
ಮುಖಪುಟ » ಸ್ಥಳಗಳು » ದುರ್ಶೆಟ್ » ಹವಾಮಾನ

ದುರ್ಶೆಟ್ ಹವಾಮಾನ

ಬೇಸಿಗೆಗಾಲ

ಈ ಕಾಲವು ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಮೇ ಅಂತ್ಯದವರೆಗೆ ಇರುತ್ತದೆ. ಈ ಸಮಯವು ಇಲ್ಲಿ ಒಣ ಹವೆ ಮತ್ತು ಬಿಸಿಲಿನಿಂದ ಕೂಡಿರುತ್ತದೆ. ಈ ಕಾಲದಲ್ಲಿ ಇಲ್ಲಿ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್‍ವರೆಗು ಏರಿಕೆಯಾಗುತ್ತದೆ. ಹಾಗಾಗಿ ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿಕೊಡದಿರುವುದು ಉತ್ತಮ. ಅದರಲ್ಲು ದುರ್ಶೆಟ್‍ನಲ್ಲಿ ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬಿಸಿಲು ಹೆಚ್ಚಾಗಿರುತ್ತದೆ. ಆದರು, ಈ ಸಮಯದಲ್ಲಿ ಈ ಪ್ರಾಂತ್ಯದಲ್ಲಿ ಜಲಕ್ರೀಡೆಯಾಡುವ ಅವಕಾಶಗಳು ಸಿಗುತ್ತವೆಯಾದ್ದರಿಂದ ದುರ್ಶೆಟ್‍ಗೆ ಭೇಟಿಕೊಡಬಹುದು.

ಮಳೆಗಾಲ

ದುರ್ಶೆಟ್‍ನಲ್ಲಿ ಮಳೆಗಾಲವು ಜೂನ್‍ನಿಂದ ಆಗಸ್ಟ್ ವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಹವಾಮಾನವು ಸಾಮಾನ್ಯವಾಗಿ ಆರ್ದ್ರತೆಯಿಂದ ಕೂಡಿರುತ್ತದೆ. ಮಧ್ಯಮ ಪ್ರಮಾಣದಿಂದ ಹಿಡಿದು ಅಧಿಕ ಪ್ರಮಾಣದವರೆಗೆ ಇಲ್ಲಿ ಮಳೆ ಬೀಳುತ್ತದೆ.

ಚಳಿಗಾಲ

ಚಳಿಗಾಲವು ಇಲ್ಲಿ ಅತ್ಯಂತ ಮುದನೀಡುವ ಅವಧಿಯಾಗಿರುತ್ತದೆ. ಈ ಕಾಲವು ನವೆಂಬರ್ ನಿಂದ ಫೆಬ್ರವರಿಯವರೆಗೆ ಇರುತ್ತದೆ. ಈ ಪ್ರಾಂತ್ಯದಲ್ಲಿ ಚಳಿಗಾಲದಲ್ಲಿ ಸುಮಾರು 22 ಡಿಗ್ರಿ ಸೆಲ್ಶಿಯಸ್‍ನಷ್ಟು ಉಷ್ಣಾಂಶವನ್ನು ಸಾಮಾನ್ಯವಾಗಿ ಕಾಣಬಹುದು.