ಧರ್ಮಶಾಲಾ ಪ್ರದೇಶದಲ್ಲಿ ಚಾರಣ ಮಾಡುವುದು ಜನಪ್ರಿಯವಾದ ಚಟುವಟಿಕೆಯಾಗಿದೆ. ಸಮುದ್ರ ಮಟ್ಟದಿಂದ 4600 ಮೀ ಎತ್ತರದಲ್ಲಿರುವ ಕಾಂಗ್ರಾ ಕಣಿವೆಯ ಮೇಲಕ್ಕೆ, ಧೌಲಾಧರ್ ಶ್ರೇಣಿಯಿಂದ ಚಾರಣದ ಯಾತ್ರೆಯು ಆರಂಭಗೊಳ್ಳುತ್ತದೆ. ಚಾರಣ ಮಾಡುವಾಗ ದೇವದಾರು, ಪೈನ್ ಮತ್ತು ಓಕ್ಸ್ ಮರಗಳು, ಸ್ಫಟಿಕದಂತಹ ಸ್ವಚ್ಛವಾದ ಹೊಳೆಗಳು, ಮಳೆಗಾಲದಲ್ಲಿ ಹುಟ್ಟುಕೊಳ್ಳುವ ಸರೋವರಗಳು ಮತ್ತು ಹಿಮನದಿಗಳು, ಕಾಡುಗಳು ಚಾರಣ ನಿರತ ಪ್ರವಾಸಿಗರನ್ನು ಪುಳಕಿತರನ್ನಾಗಿಸುತ್ತದೆ. ಚಾರಣ ಮಾಡುವಂತಹ ಮಾರ್ಗವು ಧರ್ಮಶಾಲಾದಿಂದ ಆರಂಭವಾಗಿ ಚಂಬಾ ಕಣಿವೆಯ ಮೂಲಕ ಸಮುದ್ರಮಟ್ಟದಿಂದ 4350 ಮೀ. ಎತ್ತದರಲ್ಲಿದುವ ಇಂದ್ರಹಾರ್ ಮೂಲಕ ಮುಂದುವರಿಯುತ್ತದೆ. ಈ ಚಾರಣ ಮಾಡುವಿಕೆ ಮಾರ್ಗದಲ್ಲಿ ಪೀರ್ ಪಂಜಾಲ್ ಶ್ರೇಣಿ ಮತ್ತು ಪ್ರಬಲ ಹಿಮಾಲಯದ ಪರ್ವತಗಳ ಹಿಮಾಚ್ಛಾದಿತ ಶಿಖರಗಳು ಸಮ್ಮೋಹನಗೊಳಿಸುವಂತಹ ನೋಟವನ್ನು ಉಂಟು ಮಾಡುತ್ತವೆ.


Click it and Unblock the Notifications