ತಾತ್ವಾನಿ ಬಿಸಿ ನೀರಿನ ಬುಗ್ಗೆ, ಧರ್ಮಶಾಲಾ ದಿಂದ 25 ಕೀ.ಮಿ ದೂರದಲ್ಲಿದೆ. ಇದು ಪ್ರವಾಸಿಗರ ಮಧ್ಯೆ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವೆನಿಸಿದೆ. ಈ ಬಿಸಿ ನೀರಿನ ಬುಗ್ಗೆಯು ಅದರ ಔಷಧಿಯ ಗುಣದಿಂದಾಗಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಇದರ ಹೊರತಾಗಿ ಇಲ್ಲಿಯೇ ಹತ್ತಿರದಲ್ಲಿರುವ ಮ್ಯಾಕ್ಕಿರಲ್ (Macchiral) ಜಲಪಾತವು ಪ್ರವಾಸಿಗರನ್ನು ಆಕರ್ಷಿಸುವ ಪಿಕ್ನಿಕ್ ಸ್ಥಳವಾಗಿದೆ. ಈ ಸ್ಥಳವನ್ನು ತಲುಪಲು ಟ್ಯಾಕ್ಸಿಯಂತಹ ಉತ್ತಮ ಸಾರಿಗೆ ವ್ಯವಸ್ಥೆಯಿದೆ.


Click it and Unblock the Notifications