ಧರ್ಮಶಾಲಾ ಆಗ್ನೇಯಕ್ಕೆ ಸರಿಸುಮಾರು 3 ಕೀ. ಮಿ ದೂರದಲ್ಲಿರುವ ನರ್ಗೋಟ ಎಂಬ ಸಣ್ಣ ಹಳ್ಳಿ ಅತ್ಯಂತ ಜನಪ್ರಿಯವಾದ ಒಂದು ಪ್ರವಾಸಿ ತಾಣ. ಸಮೃದ್ಧವಾದ ಹಸಿರು ಚಹಾ ತೋಟಗಳು ಮತ್ತು ಪೈನ್ ಅರಣ್ಯಗಳಿಂದ ಆವೃತವಾಗಿರುವ ಈ ಹಳ್ಳಿಯು ತನ್ನ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಸೆರೆಯಾಳುಗಳನ್ನಾಗಿ ಮಾಡುತ್ತದೆ! ಕಜಲೋಟ್ ಪಂಚಾಯತಿಯ ಆಡಳಿತದ ಅಡಿಯಲ್ಲಿ ಬರುವ ಈ ಗ್ರಾಮವನ್ನು 1986 ರ ಭೂಕಂಪದ ನಂತರ ಮರುನಿರ್ಮಾಣ ಮಾಡಲಾಯಿತು. ಅಸಂಖ್ಯಾತ ರಜಪೂತ ಕುಟುಂಬಗಳ ನೆಲೆಯಾಗಿರವ ನರ್ಗೋತ ಹಳ್ಳಿಯು ಕಾಂಗ್ರಾ ಕಣಿವೆಯ ಒಂದು ಮನಮೋಹಕ ದೃಶ್ಯಾವಳಿಗಳ ಜೊತೆಗೆ ಪ್ರಬಲ ಹಿಮಾಲಯದ ಧೌಲಾಧರ್ ಶ್ರೇಣಿಗಳು, ಟೊಪ್ಪಿಗೆ ಹಾಕಿದಂತಿರುವ ಹಿಮ, ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.


Click it and Unblock the Notifications