ನಮ್ಗಾಯಲ್ ಮಠ, ಮ್ಯಾಕ್ ಲಿಯೋಡ್ ಗಂಜ್ ಹತ್ತಿರದಲ್ಲಿದ್ದು, ಧೌಲಾಧರ್ ಪರ್ವತ ಶ್ರೇಣಿಯ ಸಂಪೂರ್ಣ ನೋಟವನ್ನು ನೀಡುತ್ತದೆ. ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಈ ಶ್ರೇಣಿಯ ಅತ್ಯಂತ ಹತ್ತಿರದಲ್ಲಿ ತಂಗಿದ್ದರಿಂದ ಅವರ ನಿವಾಸ ಇಲ್ಲಿಯೇ ಆಸುಪಾಸಿನಲ್ಲಿ ನೆಲೆಸಿದೆ. ಈ ಮಠವು ಸುಗ್ಲಾಕಾಂಗ್ (Tsuglagkhang) ಸಂಕೀರ್ಣದ ಒಂದು ಭಾಗವಾಗಿದ್ದು ಇಲ್ಲಿಗೆ ನಿರಂತರವಾಗಿ ಸಾವಿರಾರು ಬೌದ್ಧ ಯಾತ್ರಿಗಳು ಭೇಟಿ ನೀಡುತ್ತಾರೆ.