ಕಾಂಗ್ರಾದಲ್ಲಿನ ಕೋಟ್ವಾಲಿ ಬಜಾರ್ ನಿಂದ 3 ಕಿಮೀ ದೂರದಲ್ಲಿರುವ ಕುನಾಲ್ ಪತರೈ ಒಂದು ಕಲ್ಲಿನ ದೇವಸ್ಥಾನವಾಗಿದ್ದು, ಜನಪ್ರಿಯ ಪ್ರವಾಸಿ ತಾಣವಾಗಿದೆ. ಜನಪದದ ಪ್ರಕಾರ, ಈ ದೇವಾಲಯವು ಒದ್ದೆ ಕಲ್ಲಿನಿಂದ ನಿರ್ಮಿತವಾಗಿದೆ. ಇಲ್ಲಿನ ನಂಬಿಕೆಯ ಪ್ರಕಾರ, ಈ ದೇವಾಲಯದ ಕಲ್ಲುಗಳು ಯಾವಾಗ ಒಣಗಲು ಆರಂಭವಾಗುತ್ತದೆಯೋ ಆಗ ಈ ಪ್ರದೇಶಕ್ಕೆ ಮಳೆಯಾಗುತ್ತದೆ ಎನ್ನಲಾಗುತ್ತದೆ. ದೇವತೆ ಸತಿ ಯ ಪ್ರಮುಖ ಅವತಾರಗಳ ಪೈಕಿ ಒಂದಾದ, ಕಪಾಲೇಶ್ವರೀ ಎಂದೂ ಕರೆಯಲ್ಪಡುವ ಹಿಂದೂ ದೇವತೆ ದುರ್ಗಾ ಮಾತೆ ಇಲ್ಲಿ ನೆಲೆಸಿದ್ದು, ಈ ದೇವಾಲಯಕ್ಕೆ ದಿನನಿತ್ಯ ಅನೇಕ ಭಕ್ತರು ಭೇಟಿ ನೀಡುತ್ತಾರೆ. ಅಲ್ಲದೇ ಇಲ್ಲಿರುವ ಇನ್ನೊಂದು ದುರ್ಗಾ ದೇವಾಲಯವೂ ಕೂಡಾ ಹಲವಾರು ಭಕ್ತಾದಿಗಳನ್ನು, ಪ್ರವಾಸಿಗರನ್ನು ಆಕರ್ಷಿಸುತ್ತದೆ.


Click it and Unblock the Notifications