ಕರೇರಿ ಹಳ್ಳಿಯು ಧರ್ಮಶಾಲಾದ ಪ್ರಮುಖ ಪ್ರವಾಸಿ ತಾಣ. ಕರೇರಿ ಹಳ್ಳಿಯು ಸಮುದ್ರ ಮಟ್ಟದಿಂದ 2934 ಮೀಟರ್ ಎತ್ತರದಲ್ಲಿದೆ. ಇಲ್ಲಿನ ಕರೇರಿ ಸರೋವರವು ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜೊತೆಗೆ, ಕರೇರಿ ಹಳ್ಳಿಯು ಚಾರಣ ಮಾಡುವಿಕೆ ಮತ್ತು ಪಾದಯಾತ್ರೆಗೆ ಒಂದು ಅತ್ಯತ್ತಮ ತಾಣ ಎಂದು ಪರಿಗಣಿಸಲಾಗಿದೆ. ಮ್ಯಾಕ್ ಲಿಯೋಡ್ ಗಾಂಜ್ ಮೂಲಕ ಪ್ರಾರಂಭವಾಗುವ 12 ಕಿಲೋ ಮೀಟರ್ ಉದ್ದದ ಚಾರಣ ಮಾರ್ಗವು, ದಾಲ್ ಸರೋವರ, ಸತೋಬರಿ ಮತ್ತು ಘೇರಾ ಹಾಗೂ ನಂತರದಲ್ಲಿ ಕರೇರಿ ಹಳ್ಳಿಯ ಮೂಲಕ ಹಾದುಹೋಗುತ್ತದೆ. ಇಲ್ಲಿನ ಚಾರಣವು ರೋಮಾಂಚನಕಾರಿಯಾಗಿರುತ್ತದೆ.


Click it and Unblock the Notifications