ಹಿಂದೂ ಆಧ್ಯಾತ್ಮಿಕ ನಾಯಕ ಮತ್ತು ಭಾರತದ ಶಿಕ್ಷಕ, ಬಾಲಕೃಷ್ಣನ್ ಮೆನನ್ ಸ್ಥಾಪಿಸಿದ ಚಿನ್ಮಯ ತಪೋವನ ಧರ್ಮಶಾಲಾ ಪ್ರದೇಶದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಆಶ್ರಮವು ಬಾಲಕೃಷ್ಣನ್ ಮೆನನ್ ಗುರುವಿನಿಂದಾಗಿ ಸ್ವಾಮಿ ತಪೋವನ ಎಂದು ಹೆಸರೂ ಪಡೆದಿದೆ. ಬಿಂದು ಸರಸ್ ನದಿಯ ದಡದಲ್ಲಿರುವ ಈ ಸ್ಥಳ ಚಿನ್ಮಯ ಗ್ರಾಮೀಣ ಪ್ರಾಥಮಿಕ ಆರೋಗ್ಯ ಮತ್ತು ತರಬೇತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಮಹಾನ್ ಭಾರತೀಯ ಮಹಾಕಾವ್ಯವಾದ ’ಗೀತಾ’ ಕಿರು ಶಿಕ್ಷಣವನ್ನು ಕೂಡಾ ಇಲ್ಲಿ ನೀಡಲಾಗುತ್ತದೆ. ಪ್ರವೇಶದ್ವಾರದಲ್ಲಿರುವ ಹಿಂದೂ ವಾನರ ದೇವತೆ ಹನುಮಾನ್ ಪ್ರತಿಮೆಯು 9 ಅಡಿ ಎತ್ತರದಲ್ಲಿದ್ದು ಆಶ್ರಮಕ್ಕೆ ಭೇಟಿ ನೀಡುವವರನ್ನು ಸ್ವಾಗತಿಸುವಂತೆ ತೋರುತ್ತದೆ. ಇಲ್ಲಿರುವ ಪುಸ್ತಕ ಮಳಿಗೆಗಳಲ್ಲಿ ಪ್ರವಾಸಿಗರು ಪುಸ್ತಕ ಮತ್ತು ಸಿ.ಡಿಗಳನ್ನು ಕೊಂಡುಕೊಳ್ಳಬಹುದು. ಪ್ರಬಲ ಹಿಮಾಲಯದ ಶ್ರೇಣಿಗಳ ಮಧ್ಯೆ ನಿಂತಿರುವ ಆಶ್ರಮ, ಇಲ್ಲಿಗೆ ಭೇಟಿ ನೀಡುವವರಿಗೆ ನೆಮ್ಮದಿಯ ಪರಿಸರದಲ್ಲಿರುವ ವಿಶ್ರಾಂತಿಯ ಅನುಭವ ಮತ್ತು ಅವಕಾಶವನ್ನು ಒದಗಿಸುತ್ತದೆ.


Click it and Unblock the Notifications